ಪ್ರೀತಿ ಹಂಚೋಣ
ಅದ್ಯಾಕೆ ಮತ್ಸರ ಅಕ್ಕ-ಪಕ್ಕದ ಜನಕೆ
ಅದ್ಯಾಕೆ ಅಸೂಯೆ ಜತೆಯಲ್ಲಿರುವವ್ರಿಗೆ..
ನಾವ್ ಮುಂದೆ ಹೋದ್ರೆ ಅವ್ರಿಗೇನು ನಷ್ಟ
ನಾವ್ ಸಾಧ್ನೆ ಮಾಡಿದ್ರೆ ಅವ್ರಿಗೇನು ಉರಿತ?
ಮನನೊಂದು ನಮ್ಮನ್ನೆ ತೆಗಳುವರು ನಿತ್ಯ
ಎಲ್ಲರ ಮುಂದಕ್ಕೆ ಹೊಗಳುವರೊಮ್ಮೆ ಸತ್ಯ..
ತಾನು ಸಾಧಿಸಲು, ಪ್ರಯತ್ನವು ಮುಖ್ಯವಲ್ಲವೇ..
ತನ್ನಂತೆ ಪರರೆಂಬ ಯೋಚನೆ ಯಾಕಿಲ್ಲ?
ಬದುಕಲ್ಲಿ ಏನಾದ್ರೂ ಕನಸುಗಳಿರಬೇಕು,.
ಕನಸನ್ನು ನನಸಾಗಿಸೆ ಹಗಲಿರುಳು ದುಡಿಬೇಕು
ಪ್ರೀತಿ ಹಂಚಬೇಕು, ನೀತಿ ಕಾಯಬೇ..
ದ್ವೇಷದ ಬೇರನ್ನು ಕಿತ್ತೊಗೆಯಬೇಕು...
ಸತ್ಯದ ಪಥದಲ್ಲಿ ತಾ ನಡೆಯಬೇಕು...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ