ಸೋಮವಾರ, ಅಕ್ಟೋಬರ್ 22, 2018

543. ಗಝಲ್-40

ಗಝಲ್-40

ಬಿಟ್ಟು ಬಿಡಲಾರೆನೆಂದವ ಮತ್ಹೇಗೆ ಬಿಟ್ಹೋದೆ, ಬಾರೋ ಮತ್ತೊಮ್ಮೆ
ಮನದಿ ಕನಸುಗಳ ಮೂಟ್ಟೆಯ ಕಟ್ಟಿ ಬಿಚ್ಹೋದೆ, ಬಾರೋ ಮತ್ತೊಮ್ಮೆ..

ಮಾದಕ ನೋಟದಿ ಮನಸ ಕದ್ದು, ಹೃದಯ ಗೆದ್ದೆ
ಕದ್ದ ಹೃದಯವ ಹಿಂದಿರುಗಿಸಬಾರದೆ, ಬಾರೋ ಮತ್ತೊಮ್ಮೆ..

ಜೀವದ ಜೀವಕೆ ಜೀವವ ಕೊಟ್ಟು ಪಲಾಯನ ವಾದವೆ
ಜೀವವುಳಿಸೆ ನಿನ್ನಿರವು ಬೇಕಾಗಿದೆ, ಬಾರೋ ಮತ್ತೊಮ್ಮೆ..

ಎದೆ ಬಡಿತ ಕೇಳುತ್ತಿಲ್ಲವೆ ನಿನಗೆ, ಮನದ ತುಡಿತ
ಕಣ್ಣಲಿ ಕಣ್ಣನಿಟ್ಟು ಮಾತನಾಡುವುದಿದೆ, ಬಾರೋ ಮತ್ತೊಮ್ಮೆ..

ಒಂಟಿತನವ ಸಹಿಸಲಾರೆ,ನಿನ್ನ ಬಿಟ್ಟು ಬಾಳಲಾರೆ
ಹೊನ್ನ ಮಳೆಯ ಸುರಿಸಿ ಬಿತ್ತಬೇಕಾಗಿದೆ, ಬಾರೋ ಮತ್ತೊಮ್ಮೆ..

ಹೃದಯ ಬಡಿತ ಕೇಳುತಿದೆ, ಕಲ್ಲು ಕೊನರುತಿದೆ
ಪ್ರೇಮದಿಂದ ಬಾಳು ಬೆಳಗಬೇಕಾಗಿದೆ, ಬಾರೋ ಮತ್ತೊಮ್ಮೆ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ