ನವೀನ
ಬೇಕೇ ಬೇಕು ಬದುಕಿಗೊಂದು ಆಸೆ
ಆಸೆಗೊಂದು ಭಾಷೆ
ಭಾಷಾ ಬಳಕೆಯೂ.. ಆ..ಭಾಷಾ ಬಳಕೆಯೂ..
ಬಣ್ಣ ಬಣ್ಣದ ಕಾಮನ ಬಿಲ್ಲಂತೆ
ಪದಗಳ ಸಾಲು ಭಾಷಾ..
ಪದಗಳ ಸಾಲೇ ಸಾಲು..
ಆಸಕ್ತಿಯ ಪದ ಯಾವುದೆಂದರಿತು
ಬಳಸಿರಿ ನೀವೂ...ನಿತ್ಯ..
ಬಳಸಿರಿ ನೀವು..
ಜಗದೊಳು ಅನಂತ
ಭಾಷೆಯ ಸಡಗರ..
ಮಾತೃಭಾಷೆ ಒಂದೇ..ನಮ್ಮಯ..
ಮಾತೃಭಾಷೆ ಒಂದೇ..
ಭಾಷೆಯ ಬಳಸುತ
ಬರೆಯುತ ಓದುತ
ಮಾತಾಡಿ ಹಾಡುತ
ಕಲಿಯುವ ನಾವು..ಹೊಸ ಭಾಷೆ..
ಕಲಿಯುವ ನಾವು...
ಕನ್ನಡ ತಾಯ್ನುಡಿ
ಮರೆಯಲೇ ಬೇಡಿ
ಭಾಷೆಯ ಕಲಿತರೂ...ನವೀನ..
ಭಾಷೆಯ ಕಲಿತರೂ..
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅರಿಯಿರಿ ಎಂದೂ...ನಿತ್ಯ..
ಬಳಸಿರಿ ಇಂದೂ..ಎಂದೂ..ಮುಂದೂ..
ಕನ್ನಡದ ಮೇಲೆ ಆಸಕ್ತಿ
ಬೆಳೆಸಿರೀ ಎಂದೂ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ