ನಾ ಮೆಚ್ಚಿದ ಕವಿ
ನೀ ನಮ್ಮ ವರಕವಿ
ನೀ ನಮ್ಮ ದತ್ತಕವಿ
ನೀ ಜ್ಞಾನಪೀಠರಲ್ಲೊಬ್ಬ
ನೀ ದತ್ತಾತ್ರೇಯ ವರ!
ಅಂಬಿಕಾತನಯನು ಆದೆ
ಬೃಂಗದ ಬೆನ್ನೇರಿ ಬಂದೆ
ನಾರೀ ಮಾರ್ಯಾಗ
ನಗೀ ನವಿಲ ಆಡಿಸಿದೆ..
ಮಲ್ನಾಡ ಹುಡುಗೀನ ವರ್ಣಿಸಿದೆ
ಸುಗ್ಗಿ ಹಾಡ ಪೋಣಿಸಿದೆ
ಚಿಲಿಪಿಲಿ ಹಕ್ಕಿಯ ಎಬ್ಬಿಸಿದೆ
ನೇಸರನೊಂದಿಗೆ ಶೃಂಗಾರ ಹಾಡಿದೆ...
ಭಾವಗೀತೆಗಳ ಸರದಾರ ನೀ
ಕಷ್ಟಗಳ ಮೆಟ್ಟಿ ನಿಂತವ ನೀ
ಗುರುವಾಗಿ ಕಲಿತು ಕಲಿಸಿದವ ನೀ
ಬಡವ ಬಲ್ಲಿದರ ಪ್ರೀತಿ ಅರಿತವ ನೀ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ