ಭಾನುವಾರ, ಏಪ್ರಿಲ್ 15, 2018

248. ಭಾವಗೀತೆ-ಅಮ್ಮನ ಅಳಲು

ಭೂತಾಯ ಅಳಲು

ಆಹಾ ನನ್ನ ಮುದ್ದು ಮಗುವೆ
ನಿನ್ನನೆಂತು ಪೊರೆದೆ ನಾನು
ಹಾಲ ಕೊಟ್ಟು, ತುತ್ತನಿತ್ತು
ಬೇಕು ಬೇಡ ಎಲ್ಲವಿತ್ತು
ಇಂದು ಏನ ಮಾಡ ಹೊರಟೆ..

ನೀನು ಕೊಟ್ಟೆ ಹೊಂಡ ಗುಂಡಿ
ನೀರ ಚಿಲುಮೆ ಬತ್ತಿ ಹೋಗಿ
ಗಾಳಿಯೆಲ್ಲ ಕದಡಿ ಬಿಟ್ಟೆ
ನನ್ನ ಹೊಟ್ಟೆಯುರಿಸಿ ಬಿಟ್ಟೆ
ನನ್ನ ಪ್ರೀತಿ ಎಸೆದು ಬಿಟ್ಟೆ..

ಕಂದ ನಿನ್ನ ಸಲಹಿ ನಾನು
ನನಗೆ ನಾನೆ ಪರಿತಪಿಸುವೆ
ಕಷ್ಟವೆಲ್ಲ ನನಗೆ ಹಾಕಿ
ನೀ ಮಲಗಿ ಹಾಯಾಗಿರುವೆ
ಸಾಂತ್ವನಕಾಗಿ ಕಾಯುತಿರುವೆ..

ಊಟಕೆಲ್ಲ ವಿಷವ ಬೆರೆಸಿ
ಕಾಡನೆಲ್ಲ ಕಡಿದು ಹಾಕಿ
ಬೆಟ್ಟ ಗುಡ್ಡವೆಲ್ಲ ಕೊರೆದು
ಜೀವಿಗಳ ಕೊಲುತಲಿದ್ದು
ನನ್ನ ಬದುಕ ಬಿಡುವೆಯಾ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ