ಸೋಮವಾರ, ಏಪ್ರಿಲ್ 9, 2018

239.ಕವನ-ಹೂ

ಅರಳಿ ನಗುವ ಹೂ ನಾನು

ಅರಳಿ ನಗುವೆ ನಾನು
ನನ್ನ ನೋಡಿ ಕಲಿ ನೀನು//

ಹುಟ್ಟಿ ಎರಡೆ ದಿನ ಬದುಕಿದರೂ
ಪರರಿಗೆ ಸಂತಸವೀವೆ//
ಮನುಜ ಹಗೆ ಸಾಧಿಸದೆ ಯಾರೊಳು
ನೀ ಇದ ಕಲಿ ನನ್ನೊಳು//

ನನ್ನ ಬಣ್ಣವದು
ತಂಪಾಗಿಸುವುದು ನಿಮ್ಮೆಲ್ಲರ ಕಣ್ಣ//
ಕೀಳದಿರಿ ನನ್ನ
ಬದುಕಬಿಡಿರಿ ಅಣ್ಣ//

ಹಸಿರಲೆ ಬೆಳೆದು
ಪರಿಸರದಿ ಕರಗುವೆ
ಸತ್ತ ಮೇಲೂ ಬಾಡಿ
ಗಿಡಕೆ ಗೊಬ್ಬರವಾಗುವೆ//

ದೇವರನು ಅಂದಗೊಳಿಸುವೆ
ಕಾರ್ಯಕ್ರಮದ ಬಾಗಿಲಲಿ
ಕುಳಿತು ಮೆರಗು ನೀಡುವೆ
ನನ್ನ ನೋಡಿ ಕಲಿ ಮನುಜಾ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ