ನ್ಯಾನೋ ಕತೆ
ಕೆಲಸ
ಗಂಡ ಹೆಂಡತಿ ಬಂದರು. ಜೊತೆಗೆ ಮೂವರು ಸಣ್ಣ ಹೆಣ್ಣು ಮಕ್ಕಳು. ಎದುರು ಬಂದವನೇ ಗಂಡ "ಡಾಕ್ಟರ್ ನನ್ನ ಹೆಂಡತಿಗೆ ಮೂರು ತಿಂಗಳಾಗಿದೆ ದಯವಿಟ್ಟು ನೋಡಿ, ಹೆಣ್ಣಾದರೆ ಬೇಡ, ಗಂಡಾದರೆ ಇರಲಿ" ಎಂದು ನಿರಾಳವಾಗಿ ನೀರು ಕುಡಿದಂತೆ ಹೇಳಿದ. ಡಾ.ಮಹೇಶ್ ಶಾಂತವಾಗಿ ಹೇಳಿದರು, "ನೋಡಿ ಮಿಸ್ಟರ್, ನೋಡಿ ತೆಗೆದು ಹಾಕಲು ಅದು ಹಲಸಿನ ಕಾಯಿ ಅಲ್ಲ, ಜೀವದೊಡನೆ ಆಟ. ಮೊದಲೆ ಯೋಚಿಸಬೇಕಾಗಿತ್ತು, ಗಂಡಾದರೇನು, ಹೆಣ್ಣಾದರೇನು..ಇರಲಿ, ನೀವು ಹೇಳಿದ್ದು ಕಾನೂನಿಗೆ ಅಪರಾಧ."
ಹೆದರಿದವ ಎದ್ದು ಹೋಗಿ, ಮತ್ತೆ ಬಂದು ಪರೀಕ್ಷಿಸಲು ಹೇಳಿದ. ಕಾಲೇಜಲ್ಲಿ ಕೊನೆಯ ದಿನ ಮಾಡಿದ ಪ್ರತಿಜ್ಞೆ ನೆನಪಾಗಿ ತನ್ನ ಬಗ್ಗೆ ಗೌರವ ಪಟ್ಟುಕೊಂಡರು ಡಾ.ಮಹೇಶ್.
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ