ಕವನ
ತಲ್ಲಣ
ಮದುವೆಯ ಕರೆಯೋಲೆಯು
ಅಚ್ಚೊತ್ತಿ ಬಂದಿಹುದು
ಮತದಾನದ ದಿನವೂ
ಮುಂದೆಯೆ ಬಂದಿಹುದು...
ಮತದಾನಕೆ ಬಂದವರು
ಮದುವೆಗೆ ಬರುವರೆ
ಮದುಮಗ ಕಾದಿಹನು
ಗೆಳೆಯರ ಬಳಗವನು..
ಪಾರ್ಟಿಗಳೆಲ್ಲವ ಬದಿಗಿಟ್ಟು
ಮದುವೆಯ ಪಾರ್ಟಿಗೆ ಬಂದ್ಬಿಟ್ಟು
ಹರಸಿರೊ ಹೃದಯದಿ
ಎನ್ನುತ ಕರೆದಿಹನು..
ಮತದಾನವು ಬರುವುದು
ಇನ್ನೈದು ವರುಷಕೆ
ಮದುವೆಯು ಒಮ್ಮೆಲೆ
ಈ ಬಾಳಿನುದ್ದಕ್ಕೆ...
ಬನ್ನಿರಿ ಮತದಾನಕೆ
ಹಾಗೆಯೆ ಮದುವೆಗೆ
ಕುಟುಂಬ ಸಮೇತ
ಬಿರುಬಿಸಿಲಿಗೆ ಕುದಿಯುತ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ