ಸೋಮವಾರ, ಏಪ್ರಿಲ್ 9, 2018

236. ಕವನ-ಸುಗ್ಗಿ

ಸುಗ್ಗಿ ಸಂಭ್ರಮ

ಹಿಗ್ಗಿನಿಂದ ಸುಗ್ಗಿ ಬಂತು
ಸಾಗಿ ಬನ್ನಿರೆಲ್ಲರೂ
ಹೊಸ ಹೊಸ ಬೆಳೆಯು ಬಂತು
ಹರುಷ ತನ್ನಿರೆಲ್ಲರೂ//

ಮನದ ಮೆಲುಕ ಕಲಕಬೇಕು
ಹಾಡಬನ್ನಿರೆಲ್ಲರೂ..
ಹೃದಯದ ಸಂತಸ ಹಂಚಬೇಕು
ಕುಣಿಯ ಬನ್ನಿರೆಲ್ಲರೂ//

ತಾಯಿ ಭುವಿಯ ಹೊಗಳಬೇಕು
ಓಡಿ ಬನ್ನಿರೆಲ್ಲರೂ
ಕರುಳ ಕುಡಿಗೆ ಬಹುಮಾನವಿಹುದು
ಸವಿಯ ಬನ್ನಿರೆಲ್ಲರೂ//

ಕುಗ್ಗಿಕೊಳದೆ ಹಿಗ್ಗಿನಿಂದ
ಬದುಕಿ ಬಾಳಿರೆಲ್ಲರೂ
ಸಂತಸದ ಬಾಳ್ವೆಯನ್ನು
ಪಡೆಯಿರೆಲ್ಲರೂ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ