ಶನಿವಾರ, ಏಪ್ರಿಲ್ 7, 2018

232.ಕವನ-ಪ್ರೀತಿ ಅನಂತವಾಗಿರಲಿ

ಪ್ರೀತಿ ಅನಂತವಾಗಿರಲಿ

ಗಗನವೆ ಇರಲಿ, ಭುವನವೆ ಇರಲಿ
ಪ್ರೇಮವಿರಲೇ ಬೇಕಲ್ಲವೆ
ನಮ್ಮೆಲ್ಲರಲಿ?
ಪ್ರೀತಿಯ ಸೆಳೆತವು ಬಾಡದೆ ಇರಲಿ,
ಒಡೆಯದೆ ಇರಲಿ ಬಲೂನಿನ ತೆರದಲಿ//

ಹಗಲೇ ಇರಲಿ, ಇರುಳೇ ಬರಲಿ,
ಪ್ರೀತಿಯ ತಾಯತ ಕೈಯ್ಯಲ್ಲಿರಲಿ,
ಬದುಕಿನ ಲೇಪನ, ಉಸಿರಿನ ಕಂಪನದಲಿ
ಮೆದುಳ ಬಳ್ಳಿಯ ಪ್ರತಿ ಆಲೋಚನೆಯಲಿ//

ನನ್ನೆದೆ,ನಿನ್ನೆದೆ ,ಹಲವೆದೆ,ಎಲ್ಲೆಡೆಯಲಿ
ಮಾತಿನ ಮುತ್ತಿನ ಸರಗಳ ನಡುವಲಿ,
ಮಾಡುವ ಪ್ರತಿ ಕಾರ್ಯದ ಬುಡದಲಿ,
ನೋಡುವ ನೋಟದ ಕಣ್ಣಂಚಿನ ಕಡೆಯಲಿ//

ದೇಶದ, ರಾಜ್ಯದ, ಜಿಲ್ಲೆಯ,ಮನೆ-ಮನದಲಿ,
ದೇಹದ,ಅಂಗದ,ಕೋಶದ ಕಣ-ಕಣದಲಿ,
ದೇವರ, ದೈವದ ನಿತ್ಯಾಟದ ಕ್ಷಣದಲಿ,
ನಂಬಿಕೆ,ಭರವಸೆ, ಸ್ವಚ್ಛ ಪ್ರೀತಿಯೆ ಇರಲಿ//

ನಂಬಿದ ಪ್ರೀತಿಯು ಸಾಯದೆ ಇರಲಿ,
ಪ್ರೀತಿಯ ಭಾವನೆ ಎಲ್ಲೆಡೆ ಬರಲಿ
ಮನಗಳ ಕೋಮು ದಳ್ಳುರಿ ತೊಲಗಲಿ
ದೇಶದಿ ಪ್ರೇಮದ ಭಾವವು ಬೆಳಗಲಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ