ಮತದಾನ ಮಾಡೋಣ ಹಕ್ಕು ಚಲಾಯಿಸೋಣ
ಯಾವಾಗಲೂ ನಮಗೊಂದು ಮನಸಿನಲ್ಲಿ ಯೋಚನೆಯಿದೆ. ನನ್ನೊಬ್ಬಳಿಂದ ಏನಾಗುತ್ತದೆ ಎಂದು! ಆದರೆ ನಿಮಗದು ತಿಳಿದಿಲ್ಲ ನಿಮ್ಮೊಬ್ಬರಿಂದ ಏನೂ ಆಗಬಹುದೆಂದು! ಕಿರಣ್ ಬೇಡಿ,ಕಲ್ಪನಾ ಚಾವ್ಲ, ಮದರ್ ತೆರೇಸಾ, ಸರೋಜಿನಿ ನಾಯ್ಡು, ಸುಧಾ ಮೂರ್ತಿ, ಸೈನಾ ನೆಹ್ವಾಲ್, ಪಿ.ಟಿ. ಉಷಾ, ಪಿ.ವಿ.ಸಿಂಧು ಇವರೆಲ್ಲ ಒಬ್ಬೊಬ್ಬರೇ ಇರುವುದು ಭಾರತೀಯರಲ್ಲಿ! ಹಾಗೇ ನಿಮ್ಮ ಅಮೂಲ್ಯ ಮತ ಒಂದೇ ಇರುವುದು!
ಕೆಲವೊಮ್ಮೆ ಅನ್ನಿಸುತ್ತದೆ ಯಾವ ರಾಜಕೀಯ ಪಕ್ಷ ಬಂದರೂ ನಮ್ಮ ತಲೆ ಮೇಲೆ ಒಂದಷ್ಟು ಸಾಲ ಹಾಕಿ ತಮ್ಮ ಮಕ್ಕಳು ಮೊಮ್ಮಕ್ಕಳ ಕಾಲಕ್ಕೆ ಬೇಕಾದಷ್ಟು ಆಸ್ತಿ ಪಾಸ್ತಿಯನ್ನು ಮಾಡಿ ಹೋಗುವುದಷ್ಟೆ ಎಂದು! ಆದರೂ ಒಳ್ಳೆಯ ಆಲೋಚನೆಗಳಿಂದ, ಸಮಾಜ ಸೇವೆ ಮಾಡೋ ತುಡಿತದಿಂದ ರಾಜಕೀಯಕ್ಕೆ ಇಳಿದವರು ಒಬ್ಬರಾದರೂ ಇಲ್ಲವೇ? ಅವರಿಗೆ ಅವಕಾಶ ಕೊಟ್ಟರಾಯಿತು!
ಹಣ, ಅಧಿಕಾರವನ್ನು ಯಾರೂ ಬರುವಾಗ ತರಲಿಲ್ಲ ಹೋಗುವಾಗ ತೆಗೆದುಕೊಂಡು ಹೋಗೋದೂ ಇಲ್ಲ, ಇಲ್ಲಿದ್ದಷ್ಟು ದಿನ ಉತ್ತಮ ಅವಕಾಶ , ಉಪಯೋಗಿಸಿಕೊಳ್ಳಬೇಕಷ್ಟೆ!
ತನ್ನ ಹೃದಯ, ಮೆದುಳು ಹೇಳುವಂತೆ ಎಲ್ಲರೂ ಉತ್ತಮ ಕಾರ್ಯ ನಿರತರಾದರೆ ಉತ್ತಮ ಮುಂದುವರೆದ ಭಾರತವನ್ನು ಕಾಣಲು ಸಾಧ್ಯ! ಮತ ಹಾಕೋಣ ಎಲ್ಲರೂ..ಮತದಾನ ಮಾರಿಕೊಳ್ಳದಿರೋಣ.. ಅದು ನಮ್ಮ ಹಕ್ಕು ಚಲಾಯಿಸೋಣ, ಯಾರ ಮಾತನ್ನೂ ಕೇಳದೆ ತಮಗಿಷ್ಟ ಬಂದ ಒಳ್ಳೆಯ ನಾಯಕರನ್ನು ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ! ಓಟು ಹಾಕೋಣ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ