ನ್ಯಾನೋ ಕತೆ
ಮಾಧ್ಯಮ ಪ್ರಭಾವ
ಮುನಿಯ ಕಂಠಪೂರ್ತಿ ಕುಡಿದು ಬಂದು ತನ್ನ ಹೆಂಡತಿಗೆ ಹೊಡೆಯುತ್ತಿದ್ದ. ಊರ ಜನರೆಲ್ಲ ನೋಡುತ್ತಿದ್ದರೂ "ಗಂಡ -ಹೆಂಡಿರ ನಡುವೆ ನಾವ್ಯಾರು, ಅವರೇನಾದರೂ ಮಾಡಿಕೊಳ್ಳಲಿ, ಕುಡಿದ ಅಮಲು ಇಳಿದ ಮೇಲೆ ಸರಿಯಾಗಿ ಚೆನ್ನಾಗಿರ್ತಾರೆ" ಅಂತ ಸುಮ್ಮನಿದ್ದರು. ಮುನಿಯನ ದೊಡ್ಡ ಮಗು ಮನೆ ಮೂಲೆ ಸೇರಿ ಅಳ್ತಾ ಕೂತಿತ್ತು. ಸಣ್ಣ ನಾಲ್ಕು ವರ್ಷದ ಮಗು ಅಪ್ಪ ಹೊಡೆಯೋದನ್ನ ನೋಡ್ತಾ "ಐರಾವತ ಹೊಡಿತಾವ್ನಲ್ಲ ಹಂಗ್ಹೊಡಿಯೋ...ಹೊಡಿ ಮಗ ಹೊಡಿ ಮಗ ಹೊಡಿ ಮಗ...ಬಿಡಬ್ಯಾಡ ಅವ್ನ..." ಅಂತ ಹಾಡ್ ಹೇಳ್ತಾ ಕುಣೀತಿತ್ತು!
ಎದುರ್ಗಡೆ ಹಟ್ನಾಗಿದ್ದ ಅಜ್ಜಿ ,"ಕಾಲ ಕೆಟ್ಹೋಗೈತೆ, ಟಿ.ವಿ.ನೋಡ್ತಾ ಈ ಐಕ್ಲು ಅದ್ಯಾವ್ ತರ ಬುದ್ಧಿ ಕಲೀತಾವ್ ಸಿವ್ ನೇ" ಅಂತ ತಲೆ ಚಚ್ಕೊಳ್ತಾ ಇದ್ದಿದ್ ಯಾರ್ಗೂ ಕೇಳೇ ಇಲ್ಲ!!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ