ಭಾನುವಾರ, ಏಪ್ರಿಲ್ 15, 2018

246. ಭಕ್ತಿಗೀತೆ-ಬೇಡಿಕೆ

ಭಕ್ತಿಗೀತೆ

ಬೇಡಿಕೆ

ನಮ್ಮ ಕಾವ ದೇವನೆ
ನೀಡು ಸುಖದ ಸಾಧನೆ
ಮನಕೆ ಶಾಂತಿ ನೀಡಿ ಕಾಯೊ
ಇದುವೆ ನಮ್ಮ ಪ್ರಾರ್ಥನೆ..//

ದ್ವೇಷವೆಲ್ಲ ಅಳಿಸಿ ಹೋಗಿ
ಪ್ರೇಮ ಕಾವ್ಯ ಚಿಮ್ಮಲಿ
ರೋಷವೆಲ್ಲ ಕೊಚ್ಚಿ ಹೋಗಿ
ಜೀವ ಸಹನೆ ಪಡೆಯಲಿ//

ಜನರ ಮನವು ಸ್ವಚ್ಛವಾಗಿ
ಶಾಂತಿ ಮಂತ್ರ ಉಕ್ಕಲಿ
ರಾಜಕೀಯ ತಂತ್ರ ಮುರಿದು
ಒಳ್ಳೆ ನಾಯಕ ಸಿಕ್ಕಲಿ//

ಜಾತಿ ಮತಗಳಳಿಸಿ ಹೋಗಿ
ದೇಶವೊಂದೆ ಎನ್ನಲಿ
ಎಲ್ಲ ಜನತೆ ಒಟ್ಟು ಸೇರಿ
ರಾಮರಾಜ್ಯ ಕಟ್ಟಲಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ