ನಿನ್ನೊಳಗೆ ನಿನ್ನ ಹುಡುಕೊ
ನೀನಾಗೆ ನೀನಾಗೊ
ಜಗದಾಗೆ ಇತರರ
ನೋಡಿ ಬಹಳವೆ ತಿಳ್ ಕೋ
ಯಾರಿಲ್ಲ ಜಗದಲ್ಲಿ
ನಾವಿಲ್ಲಿ ಒಂಟಿ..
ಪಯಣದಲಿ ಸ್ನೇಹಿತರು
ಬಂಧುಗಳು ಜೊತೆಯಾಗಿ
ಖುಷಿಯಲ್ಲಿ ಕ್ಷಣ ಕಳೆದು
ಓಡುವರು ತಮ್ಮ ಕೆಲಸಕೆ
ಒಳ್ಳೆಯ ಗುಣವಿರಲಿ
ಮನ ಬಾಡದಿರಲಿ
ಪ್ರೀತಿ ಆದರಗಳು
ಉಕ್ಕಿ ಹರಿದಿರಲಿ
ಅಸೂಯೆ ಮತ್ಸರ
ದೂರಾಗಿ ಹೋಗಲಿ
ಬಾಳು ಹಾಯಾಗಿ
ಉದಾಹರಣೆಯಾಗಿರಲಿ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ