ಮಂಗಳವಾರ, ಏಪ್ರಿಲ್ 3, 2018

222. ಜಾನಪದ ಶೈಲಿ ಗೀತೆ

ಜಾನಪದ ಶೈಲಿ ಭಾವಗೀತೆ

ನೋಡ ನನ್ನವ್ಳ ಚಂದಾನ

ನಂಗವ್ಳಂದ್ರೆ ತುಂಬಾ ಇಷ್ಟ
ಅವ್ಳ್ ನಗು ನೋಡಿಲ್ಲಾಂದ್ರೆ ಕಷ್ಟ//ಪ//

ನನ್ ಹುಡ್ಗಿ ಬರ್ವಾಗ
ಹಾವಂಗೆ ಬಳುಕೋ ಜಡೆ
ಬಾಗ್ತೈತೆ ಬಾಳಿ ದಾರಿಯ ಕೊಟ್ಟು
ನನ್ಹುಡುಗಿ ದಂತದ ಬೊಂಬೆ//

ನವಿಲಂತೆ ಕುಣಿತಾಳಾಕಿ
ಶುದ್ಧ ಮನದ ಹುಡುಗಿ
ಮನಿಮಂದಿಗೆಲ್ಲಾ ಪ್ರಾಣ
ನನ್ನಾ ಬಂಗಾರ, ನನ್ನುಸಿರು//

ಇಳಕಲ್ ಸೀರಿ ಉಟ್ಟು
ಜರತಾರಿ ಕುಪ್ಸ ತೊಟ್ಟು
ಬಂದಾಗ ನನ್ನ ಪಿರೂತಿ
ಸಹಿಸೋಲ್ಲ ನಾ ಖುಷಿಯ//

ಕೆನ್ನೆ ಕೆಂಪನೆ ಬಣ್ಣ
ಸಂಪಿಗೆಯಂಥ ಕಣ್ಣ
ಮಾಮಾಂತ ಕರೆದಾಗ
ನಾ ಕಳ್ಕೊಂಡೆ ನನ್ನಾ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ