ಹನಿಗವನ
ಬೇಸಿಗೆ ಬಿಸಿಲು
1. ನೆಲ-ಜಲ
ತಾಳಲಾರೆನು ದಗೆಯ
ಬೇಸಿಗೆ ಸುಡು ಬಿಸಿಲ!
ಒಡೆದೋಗಿದೆ ನೆಲ
ಇಲ್ಲದೆ ಭೂತಾಯಲಿ ಜಲ!!
2. ಬಿಸಿಲ ದಗೆ
ಈ ಬೇಸಿಗೆಯ
ಸುಡು ಬಿಸಿಲು
ತಂದಿದೆ ಸೆಕೆಯ!
ತಿನ್ನಲು ಬೇಡ
ಕುಡಿಯಲು ಕೊಡಿ
ತಂಪು ಪಾನೀಯ!!
3. ಭೂಮಿ
ಭೂಮಿಯೂ ಹೆಣ್ಣಲ್ಲವೇ
ಅದಕೆ ಸಹಿಸಿ ಬಾಳುತಿಹಳು
ಹಗಲಲಿ ಸೂರ್ಯನ ದಗೆಯ!
ಬೇಸಿಗೆಯಲಿ ಬಿಸಿಲ ಕಾಟವ!!
4.ದಗೆ
ಬಿರು ಬೇಸಿಗೆಯ
ಬಿಸಿಲ ದಗೆಯ
ಬಸವಳಿಯೆ ರವಿ
ಬಡಿಸಿಹನು ತಾ..
5.ಬಿಸಿಲು
ಮಳೆ ನೀರು ಕರಗ್ಹೋಗಿ
ಬೇಸಿಗೆಯ ಬಿಸಿಲುಕ್ಕಿ
ಸೆಕೆಯ ಧಾರೆಯು ಚಿಮ್ಮಿ
ಕೊಡೆ ಹಿಡಿಯೇ ಪಮ್ಮಿ!
ಭುವಿ ಬಿಸಿಯಿದೆಯೇ ಕಮ್ಮಿ?
6. ಬೇಸಿಗೆ
ವೈಶಾಖದ ಬೇಸಿಗೆಯೇ
ಬಿರು ಬಿಸಿಲಿನ ಹಾಸಿಗೆಯೇ
ನೆತ್ತಿಯು ಉರಿಯುತಿದೇ
ಸೂರ್ಯ ಕೋಪದಿ ಕುದಿಯುತಿದೇ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ