ಸೋಮವಾರ, ಏಪ್ರಿಲ್ 23, 2018

261. ಸಣ್ಣ ಕತೆ-ಘಟನೆ

ನ್ಯಾನೋ ಕತೆ

ಕ್ಷಣ

ಅಪೂರ್ವಳ ಫೇಸ್ ಬುಕ್ ಓಪನ್ ಮಾಡುವಾಗಲೆ ಅಚ್ಚರಿಯೊಂದು ಕಾದಿತ್ತು! ಹನ್ನೆರಡು ವರುಷಗಳಿಂದ ತನ್ನ ಹೊಟ್ಟೆಪಾಡಿಗಾಗಿ ಖಾಸಗಿ ಶಾಲೆಯೊಂದರಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಳು. ಗುರುವಾಗಿ,ತಾಯಾಗಿ ಪ್ರೀತಿಯಿಂದ ವಿದ್ಯಾರ್ಥಿಗಳೆಲ್ಲರನ್ನು ತನ್ನದೇ ಮಕ್ಕಳೆಂಬಂತೆ ನೋಡಿಕೊಳ್ಳುತ್ತಿದ್ದರೂ ಮಕ್ಕಳಿಂದ ಅವಳೇನೂ ಬಯಸುತ್ತಿರಲಿಲ್ಲ!
ಅಂದು ಬಂದ ನೋಟಿಫಿಕೇಶನ್ ನೋಡಿ ತನ್ನ ಜನ್ಮ ಸಾರ್ಥಕವಾಯ್ತು ಅಂದುಕೊಂಡಳು! ನಿಮ್ಮ ಇಷ್ಟದ,ನಿಮ್ಮ ಜೀವನದಲ್ಲಿ ಅತಿಯಾಗಿ ಪ್ರಭಾವ ಬೀರಿದ, ನಿಮ್ಮ ನೆನಪಿನಲ್ಲಿ ಉಳಿವ,ನೀವು ಎಂದಿಗೂ ಮರೆಯಲಸಾಧ್ಯವಾದ ಗುರುಗಳನ್ನು ಹೆಸರಿಸಿ ಎಂದು ಗುಂಪೊಂದು ಕೇಳಿದ ಪ್ರಶ್ನೆಗೆ ಅವಳ ಒಂಭೈನೂರು ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ತನ್ನ ಹೆಸರನ್ನು ಸೂಚಿಸಿರುವುದು ಜೀವನದಲ್ಲಿ ನಂಬಲಾಗದ ಘಟನೆಯಾಗಿತ್ತು!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ