ಸೋಮವಾರ, ಏಪ್ರಿಲ್ 9, 2018

238. ಹನಿಗಳು-ಪಾಠ

ಪಾಠ
ಹನಿಗಳು

1. ಹಲ್ಲು

ನಲ್ಲೆ ನೀ ಕಲಿಸಿದ ಪಾಠ
ನೆನಪಿಹುದು ಅನವರತ
ಕಚ್ಚಲು ಹೋದಾಗಲೆಲ್ಲ ನೋಯುವುದು
ಕಳೆದುಕೊಂಡ ಹಲ್ಲು!!
ನೀನೇನೋ ತೆಗೆದೆ
ನನ್ನ ಸುಖವ ಕಳೆದೆ!!!

2. ಕಲಿ ಮನುಜ!

ಬಾನಾಡಿ ಕಲಿಸಿತ್ತು ಪಾಠ
ನೀರಿಗೆ ಬಿದ್ದ ಇರುವೆಗೆ
ತರಗೆಲೆಯ ಹಿಡಿದು
ಬದುಕ ನೀಡಿ!
ಮನುಜ ಹಾಕುವನು
ಸಾಯಲೆಂದು ನೀರಿಗೆ ದೂಡಿ!!!

3. ಪಾಠ
ಇಂದು ಹಿಂದಿನಂತಿಲ್ಲ
ಪಾಠ ಬೋಧಿಸಲು ಗುರುಗಳು ಬೇಕಿಲ್ಲ!
ಕಂಪ್ಯೂಟರ್, ಜಂಗಮವಾಣಿ
ಟಿವಿ ಪರದೆಗಳಿವೆಯಲ್ಲ?
ಹುಟ್ಟು, ಬದುಕು ಸಾವುಗಳ
ಪಾಠವನು ಚಿತ್ರಸಹಿತ ವಿವರಿಸುವುವಲ್ಲ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ