ನನ್ನಪ್ರಾಣ ಸ್ನೇಹಿತ
ನನ್ನ ಬಾಲ್ಯದ ಗೆಳೆಯ, ನನ್ನ ಸ್ನೇಹಿತ ನನ್ನ ಜೀವದ ಗೆಳೆಯ. ನಾನ್ಯಾವತ್ತೂ ನನ್ನನ್ನು ಅವನ ಸಂಗಾತಿಯಾಗಿ ಊಹಿಸಿಯೂ ಇರಲಿಲ್ಲ! ಜಗಳವಾಡಿಕೊಂಡು, ಕಿತ್ತಾಡಿಕೊಂಡು ಇರುತ್ತಿದ್ದ ನಾವು ನಮಗೇ ಅರಿವಿಲ್ಲದೆ ಅದು ಹೇಗೆ ಮದುವೆಯಾಗಿ ಬಾಳ ಸಂಗಾತಿಗಳಾದೆವೋ ತಿಳಿಯದು. ಭಗವಂತನ ಆಟ ಎಂದರೆ ಇದೇ ಇರಬೇಕು!
ನಾನೋ ಗೆಳೆಯರ ಜೊತೆ, ಹಾಸ್ಟೆಲ್ ಅಂತ ಸಮಯ ಕಳೆಯುತ್ತಿದ್ದುದೇ ಹೆಚ್ಚು. ಅದೂ ಸಾವಿರಾರು ಗೆಳೆಯರು, ಗೆಳೆಯರಲ್ಲಿ ನನಗೆ ಜಾತಿ-ಮತ ಬೇಧ,ಲಿಂಗ ಬೇಧ ಯಾವುದೂ ಇರಲಿಲ್ಲ! ಈಗಲೂ ಇಲ್ಲ ಬಿಡಿ.. ಅಂಥ ಸಿಕ್ಕಾಪಟ್ಟೆ ಸ್ನೇಹಿತರಲ್ಲಿ ಇವನೂ ಒಬ್ಬ!
ಅವನ ಗೆಳೆಯರೋ ಬೆರಳೆಣಿಕೆಯಷ್ಟೇ! ಅವರೊಡನೆ ತೀರಾ ಕ್ಲೋಸ್!ನನ್ನ ಹಾಗಲ್ಲ! ಕುಟುಂಬದ ಅಟ್ಯಾಚ್ ಮೆಂಟ್ ಜಾಸ್ತಿ! ಅಮ್ಮ,ಅಕ್ಕ,ಅಕ್ಕನ ಮಗಳೆಂದರೆ ಪ್ರಾಣ!ಆ ಲಿಸ್ಟಿಗೆ ನಾನೂ ಸೇರಿಕೊಂಡೆ!
ಋಣಾನುಬಂಧ ಎಂಬ ಪದಕ್ಕೆ ಅರ್ಥ ಸಿಕ್ಕಿದ್ದು ಇವನಿಂದಲೇ. ನನ್ನ ಗೆಳೆಸಯನಾಗಿ ನನ್ನ ಬಗ್ಗೆ ತಿಳಿದುಕೊಂಡು, ನಮ್ಮ ಮನೆ-ಮನವರಿತು ಬಾಳ ಸಂಗಾತಿಯಾದ ನನ್ನ ಪ್ರಾಣ ಸ್ನೇಹಿತ! ದಿಯಾ ನಮ್ಮಿಬ್ಬರ ಪ್ರೀತಿಯ ಕುಡಿ! ನಮ್ಮ ಸಂಗಾತಿ ಸ್ನೇಹಕ್ಕಿಂದಿಗೆ ಆರು ವರುಷಗಳ ಸಂಭ್ರಮ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ