ನನ್ನ ಮನಕೆ
ಬೆಳಗಿನ ನೇಸರನ
ಬಿರುಬಿಸಿಲ ಬೆರಗು
ಅನುಭವಿಸು ಮನವೆ...
ಭಯದ ಬಾದೆಗೆ
ಬಿರಬಿರನೆ ಬೀಳದೆ
ಬೆಳೆಯಂತೆ ಬಿರುಸಾಗಿ
ಬೆಳೆಯೋ ಮನವೆ..
ಬಾಗಿಲೊಳು ಬಳ್ಳಿಯಂತೆ
ಭದ್ರವಾಗಿ ತಬ್ಬದೆ
ಒಳನುಗ್ಗಿ ಜೀವನವ
ಅನುಭವಿಸು ಮನವೆ...
ಭವಿತವ್ಯ ಎಂತಿಹುದೋ
ಭೂತದ ನೆನಪುಗಳ
ಮರುಕಳಿಸೋ ಮನವೆ...
ಭಯದಿಂದ ಹೊರಬಂದು
ಬಿಗಿಯಾಗಿ ಬಿಗುವಾಗಿ
ನಗೆಯನ್ನು ಸ್ವೀಕರಿಸು ಮನವೇ..
ಬರವಿಹುದು ಬಳಿಯಲ್ಲೆ
ಬರಲಾರೆ ನಾನಲ್ಲಿ
ಬದುಕು ಭರದಿ ಮನವೇ..
ಬಸವಳಿದು ಹೋಗದಿರು
ಬಿಟ್ಟುಬಿಡು ಬೇಡದ
ಬೇಕಾದ್ದ ಸವಿದು ಬದುಕು ಮನವೇ..
ಬೇಕು ಬೇಕೆಂಬ
ದುರಾಸೆ ಬೇಡ
ಸಂತೃಪ್ತಿಯಿಂದ ಬಾಳು ಮನವೇ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ