ಶನಿವಾರ, ಏಪ್ರಿಲ್ 7, 2018

5. ಆಸೆ ಕವನ

ನನ್ನ ಹುಡುಗಾ
ನಿನ್ನ ಮೆತ್ತನೆಯ ತೊಡೆ ಮೇಲೆ
ನನ್ನ ತಲೆಯಿರಿಸಿ
ನನ್ನ ಕೈಗಳಿಂದ ನಿನ್ನ
ಕೆನ್ನೆಗಳ ಬಳಸಿ,
ನಿನ್ನ ಕಣ್ಣಲ್ಲೆ ನನ್ನ ಕಣ್ಣನ್ನಿಟ್ಟು
ಕಣ್ ನೋಟದಲೇ ಹುಚ್ಚೆಬ್ಬಿಸಿ
ಗಂಟೆಗಟ್ಟಲೆ ಕಣ್ಣಲ್ಲೇ ಚಾಟ್ ಮಾಡೋ ಆಸೆ ಕಣೋ...
ನಿನ್ನ ತುಟಿಗಳಿಗೆ ನನ್ನ ತುಟಿಗಳಲಿ
ಮಸಾಜ್ ಮಾಡೋ ಆಸೆ ಕಣೋ..
ನಿನ್ನ ಬಿಸಿಯುಸಿರು ನನ್ನ
ಕೆನ್ನೆಗೆ ತಾಗಿ ಆ ಬಿಸಿಯ
ಹೀರೋ ತವಕ ಕಣೋ..
ನಿನ್ನ ಅಂಗಾಂಗಗಳ ನನ್ನ
ಪುಟ್ಟ ಬೆರಳ ತುದಿಯಲಿ
ಸ್ಪರ್ಶಿಸೊ ಆಸೆ ಕಣೋ..
ನನ್ನ ನಾಲಗೆಯಲಿ ನಿನ್ನ
ನಾಲಗೆಯ ರುಚಿಯ
ಸವಿಯುವಾಸೆ ಕಣೋ..
ನನ್ನೆದೆಗೆ ನಿನ್ನನೊರಗಿಸಿ
ಪ್ರೀತಿಯಿಂದ ತಲೆ ಕೂದಲಲಿ
ಆಟವಾಡುತ್ತಾ ನೇವರಿಸಿ
ತುಟಿಯೊತ್ತುವಾಸೆ ಕಣೋ..
ನಿನ್ನ ಜೊತೆ ಸರಸವಾಡುತ್ತಾ
ಕಾಲಕಳೆಯುವಾಸೆ ಕಣೋ..
ಮನೆಯೊಳಗೆ ಹೊಕ್ಕಾಗ
ಮುಖ ತೊಳೆಯ ಕೊಡದೆ
ಸರಸವಾಡೊ ಆಸೆ ಕಣೋ..
ಸ್ನಾನದ ಕೋಣೆಗೆ ನಿನ್ನೊಡನೆ
ಹೊಕ್ಕು ಮುತ್ತಲ್ಲಿ ಮತ್ತು
ಬರಿಸುವಾಸೆ ಕಣೋ..
ಮತ್ತೇರಿದ ಮುತ್ತನಿತ್ತು
ಸುತ್ತೆಲ್ಲವು ಸುತ್ತಿ
ಬಹು ಸಮಯ ನಿನ್ನೊಡನೆ
ಕಳೆಯುವಾಸೆ ಕಣೋ..
ನನ್ನೆದೆಬಡಿತ ನಿನ್ನ ಕಿವಿ
ತಮಟೆಗೆ ಕೇಳುವಷ್ಟು
ಸನಿಹ ಇರುವಾಸೆ ಕಣೋ..
ನಿನ್ನೊಳಗೆ ಹೊಕ್ಕಿ
ನಾನು ನೀನಾಗೊ ಆಸೆ ಕಣೋ..
ನಿನ್ನ ಕಣ್ಣ ಬಂಬದಲಿ
ನನ್ನ ಹುಡುಕುವಾಸೆ ಕಣೊ..
ಕೈತುತ್ತನೊಂದ ಕೈಹಿಡಿದು
ತಿನುವಾಸೆ ಕಣೋ..
ಹಣೆಗೆ ತುಟಿಯೊತ್ತಿ ತುಟಿಯಲ್ಲೆ
ಹಣೆಮೇಲೆ ಚಿತ್ರ ಬರೆವಾಸೆ ಕಣೋ...
ನಿನ್ನೊಳಗೆ ಜೊತೆ ಸೇರಿ
ನಿನ್ನಲೊಂದಾಗೊ ಆಸೆ ಕಣೋ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ