ಹನಿ ಹನಿ ವಾರದ ಸ್ಪರ್ಧೆಗೆ
ಜನಪದ ಶೈಲಿ ಪ್ರಯೋಗ
ನನ್ ರಾಜ
ನನ್ ರಾಜ ನನ್ಹುಡುಗ
ಬರ್ತಾನ ಕುದುರಿ ಏರಿ
ಅವನಂದ್ರೆ ನಂಗಿಷ್ಟ
ಖುಷಿ ತಡ್ಯೋದೇ ಕಷ್ಟ...
ಕುಡಿಮೀಸೆ ಬಿಟ್ಟಾನ
ಅಲ್ಲೇನೆ ನಗ್ತಾನ
ಕಣ್ ಮಿಟುಕ್ಸಿ ಕರೀತಾನ
ನನ್ ಪ್ರಾಣ ಅವ್ನೇನೆ...
ನಮ್ಮನೆಯ ತೋಟ್ದಾಗೆ
ಕರೆದು ಮುತ್ತನು ಕೊಟ್ಟ!
ನಾ ಹ್ಯಾಂಗ ಬಿಟ್ಟಿರಲಿ
ನನ್ನ ಹೃದಯ ಚೋರನ್ನ...
ನನ್ನ ಮಾಮ ಬಂದಾಗ
ಕೈ ತುಂಬಾ ಬೌಮಾನ
ನನಗಾಗೆ ಎಲ್ಲಾನೂ
ತಂತಾನೇ ತರತಾನ...
ಕಿರುನಗೆಯ ಚೆಲ್ತಾನ
ಕಣ್ಣಲ್ಲೆ ಕೊಲ್ತಾನ
ನನ್ ಹುಡ್ಗ ಚಿನ್ನ
ನನ್ ಮನದ ರನ್ನ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ