ಬುಧವಾರ, ಏಪ್ರಿಲ್ 4, 2018

226.ಭಾವಗೀತೆ-ನೀ

ಭಾವಗೀತೆ

ನೀ ಬಂದೆ ಬಾಳಲಿ ನನ್ನ
ಮನದಾಸೆ ಫಲಿಸಿತು ಚಿನ್ನ
ನಿನ್ನ ಸೇರಿ ನಲಿಯಿತು ಮನವು
ಬಳಿ ಸಾರಿ ಕಳೆಯಿತು ದಿನವು//

ಸಂತಸವು ನಿತ್ಯ ಬಾಳಲಿ
ಆಸೆಗಳು ಸೇರಿ ಹೋಗಲಿ
ಬದುಕು ಬಂಗಾರದಂತೆ
ಹೊಳೆಯುತ್ತಾ ಮುಂದೆ ಸಾಗಲಿ//

ನಿನ್ನಾಸರೆ ನನ್ನ ಜೀವಕೆ
ನನ್ನ ರಕ್ಷೆಯು ನಿನ್ನುಸಿರ ಭಾವಕ್ಕೆ
ಮಧುರ ಮಾತೇ ಮನಕಾಧಾರ
ಸವಿನುಡಿಯಲೇ ಸಹಕಾರ//

ದಿಗಂತದ ಪಯಣ ನಮ್ಮದು
ಎಂದಿಗು ಕಲಿಕೆ ಇಹುದು
ಯಾರೂ ಮೇಲು-ಕೀಳಿಲ್ಲ
ಕಷ್ಟದಲಿ ಸ್ಪಂದಿಸುವೆಯಲ್ಲ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ