ಹನಿ-1
ಚಂಚಲ
ಚಂಚಲವು ನಮ್ಮ ಮನ
ಕಾಡುತಿಹ ಮುದ್ದು ಮನ
ಗೆಳತಿ ಸಿಗದೆ ಹೋದರೆ
ಮೌನವು ಮಧುರ ಮನ
ಮಾತನಾಡದೆ ಇದ್ದರೆ
ಮರೆವುದು ತನ್ನತನ!
ಹನಿ-2
ನೀ ಯಾವಾಗಲು ಚಂಚಲ ಚಿತ್ತೆ
ಅದಕೆ ಹಾರಾಡುವರು ಅತ್ತೆ
ಬೈದಾಡುವರು ನಿನ್ನ 'ಕತ್ತೆ'
ಅದಕೆಂದೆ ನೀ ರಾತ್ರಿಯಿಡೀ ಅತ್ತೆ
ತೇವವಾಯಿತು ಮೆತ್ತನೆ ಮೆತ್ತೆ!!
ಅಷ್ಟಕ್ಕೆಲ್ಲ ಅಳಬೇಕಿತ್ತೆ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ