ಸೋಮವಾರ, ಏಪ್ರಿಲ್ 9, 2018

237. ಚುಟುಕುಗಳು-ರಜೆಯ ಮಜಾ

ಚುಟುಕುಗಳು

ರಜೆಯ ಮಜಾ

1. ರಜೆ ಬಂತು ರಜೆ
    ಶಾಲೆಗೆಲ್ಲ ರಜೆ
    ಅಜ್ಜಿ ಮನೆ ಕಡೆ ಹೆಜ್ಜೆ
    ಬಜ್ಜಿ ಸವಿಯುವ ಬಿಟ್ಟು ಲಜ್ಜೆ!!

2.  ಬೇಸಿಗೆ ರಜೆ
ಖುಷಿಯನು ತಂತೋ
ಬಾರೋ ಮೈದಾನಕೆ
ಬ್ಯಾಟನು ಹಿಡ್ಕೋ..
ಹೊಲದಾಗೆ ಗೂಡುಕಟ್ಟಿ
ಮನೆಯಾಗೆ ರಾಗಿ ರೊಟ್ಟಿ!!

3. ಕಳೆವೆವು ರಜೆಯನು ಮನೆಯಲ್ಲೆ
ಶಾಲೆಯು ಇಹುದು ಸನಿಹದಲೆ
ಮೈದಾನವಿಹುದು ಬದಿಯಲ್ಲೆ
ಬ್ಯಾಟು ಚೆಂಡು ಇಹುದು ಕೈಯಲ್ಲೆ
ಜೋರಿನ ಪದಗಳು ಹಿರಿಯರ ಬಾಯಲ್ಲೆ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ