ನನ್ನ ಪರಿಕಲ್ಪನೆಯ ಮತದಾನ
ಮತದಾನವು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ. ಅದನ್ನು ಅವನು ಸರಿಯಾಗಿ ನಿರ್ವಹಿಸಬೇಕು ಎಂದಾದರೆ ಅವನಿಗೆ ಅದರಲ್ಲಿ ಆಸಕ್ತಿಯಿರಬೇಕು. ಆಸಕ್ತಿ ಬರಬೇಕಾದರೆ ನಾಯಕ ಸೂಕ್ತವಾಗಿರಬೇಕು. ಅವನಿಗೆ ನಾಯಕತ್ವದ ಎಲ್ಲಾ ಗುಣಗಳಿರಬೇಕು.
ಹಿಂದೆ ಊರಿಗೊಬ್ಬ ನಾಯಕ ಇರುತ್ತಿದ್ದ, ಅವನ ಮಾತನ್ನು ಎಲ್ಲರೂ ಕೇಳುತ್ತಿದ್ದರು. ಕಾಲಕ್ರಮೇಣ ಅವನ ತಪ್ಪುಗಳನ್ನು ಖಂಡಿಸುತ್ತಾ ನಾಯಕತ್ವದ ಪಟ್ಟಕ್ಕೆ ಇನ್ನೊಬ್ಬ ನಿಲ್ಲಲು ಹವಣಿಸಿದ. ಅವರಿಬ್ಬರ ಆಯ್ಕೆಗೆ ಮತದಾನ ಬಂತು. ನಂತರ ನಾಯಕನ ಸ್ಥಾನಕ್ಕೆ ಸ್ಪರ್ಧಿಸಲು ಹಲವಾರು ಜನ ಬಂದರು, ಪೈಪೋಟಿ ಬೆಳೆಯಿತು. ಆಮಿಷಗಳು ಪ್ರಾರಂಭವಾಯಿತು. ಹಠ, ಕೊಲೆ,ಸುಲಿಗೆಗಳೂ ನಡೆದವು.
ಆದರೆ ಮತದಾನದಲ್ಲಿ ಪಕ್ಷವೇ ಮುಖ್ಯವಾಗಬಾರದು.ಯಾವುದಾದರೂ ಎರಡೇ ಪಕ್ಷವಿರಬೇಕು,ಇಲ್ಲ ಸ್ವತಂತ್ರರೇ ಇರಬೇಕು. ಪಕ್ಷ ಎಂದಾಗ ಎಂಥವರನ್ನೂ ಜನ ಬೆಂಬಲ ಇದೆ ಎನ್ನುವ ಕಾರಣಕ್ಕೆ ಸೇರಿಸಿ ಅಪಹಾಸ್ಯ ಎದುರಿಸ ಬೇಕಾಗುತ್ತದೆ. ಒಬ್ಬನಿಂದ ಇಡೀ ಪಕ್ಷದ ಹೆಸರು ಹಾಳಾಗಲೂ ಬಹುದು! ಅದನ್ನೆ ಮತ್ತೊಂದು ಪಕ್ಷದವರು ಟೀಕಿಸುತ್ತಾರೆ. ಟೀಕಾರೋಪ ಇಲ್ಲದೆ ತನ್ನ ಪಕ್ಷ ಏನೇನು ಮಾಡಿದೆ ಎಂದು ಹೇಳಿಕೊಂಡರೆ ಅಷ್ಟೆ ಸಾಕು. ಪ್ರಣಾಳಿಕೆಗಳು ನಿಜವಾಗಿ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಲು ನಾಯಕರು ಮಾತ್ರವಲ್ಲ,ಜನರೂ ಸರಿಯಿರಬೇಕು! ಆಗ ಮತದಾರ ತಾನಾಕೆ ಒಲಿದು ಬರುತ್ತಾನೆ. ಅಲ್ಲಿ ಜಾತಿ ಮತ ಧರ್ಮಗಳ ಹಂಗಿರಬಾರದು! ನಾವೆಲ್ಲ ಒಂದೇ ದೇಶಕ್ಕಾಗಿ ಎಂಬ ಭಾವನೆ ಬೆಳಗಬೇಕು. ಅದು ಸಾಧ್ಯವೇ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ