ಬದುಕು
ಬದುಕ ಪಯಣವದು ಗುರಿಯಿಲ್ಲದ ಯಾಣ
ಬಾಳ ನೌಕೆ ಸೇರುತಿದೆ ಎಣೆಯಿಲ್ಲದ ತಾಣ
ಎಂದು ಕೊನೆಯೋ ತಿಳಿಯದು ಈ ಜೀವನ ಗಾನ
ಕಡೆಯವರೆಗೆ ನಗುತಲಿರಲಿ ನಮ್ಮೆಲ್ಲ ಜನ//
ಮಡಿವಂತಿಕೆ ತೊಲಗಿ ಹೋಗಿ
ಕಾಣಿಸಲಿ ಸ್ವಚ್ಛ ಮನವು
ಗಾಳಿಯಲ್ಲಿ ಲೀನವಾಗಿ
ಕರಗುತಿರಲಿ ದುಃಖವು//
ದೈತ್ಯಾಕಾರದ ತೆರೆಯಲ್ಲಿ
ತೇಲಿ ಬಿಡಲಿ ಬೇಸರವು
ಮನಃಶಾಂತಿಯ ತೊಟ್ಟಿಲಲ್ಲಿ
ಮಲಗಿರಲಿ ಜನಮನವು//
ದೇವನೊಬ್ಬ ನಾಮ ಹಲವು
ಎನ್ನುವುದ ನೆನಪಿಸಲಿ
ಬಿಳಿಯಾದುದೆಲ್ಲ ಹಾಲಲ್ಲ
ಎಂಬ ಮಾತು ಮರೆಯದಿರಲಿ//
@ಪ್ರೇಮ್@ಡಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ