.ನ್ಯಾನೋ ಕತೆ..
ಸಂಬಂಧ
ಗಂಡ ರಜತ್ ರೂಪವಂತನಾದರೂ ಗಾಂಧಿ. ಆದರೂ ಅವನೆದುರು ಸಂತಸದಿಂದಿದ್ದ ಮಡದಿ ಶೀತಲ್ ಗೆ ಅವನಲ್ಲೇನೋ ಕೊರತೆ ಕಂಡಿತು. ದೂರದ ಊರಿಗೆ ಅವನಿಗೆ ವರ್ಗವಾದಾಗ ಖುಷಿಪಟ್ಟಳು.
ತವರು ಮನೆಯಲ್ಲಿ ಉಳಿದು ತನ್ನ ಮಗನ ಸಂಗೀತ ಗುರುಗಳ ಜೊತೆ ಸ್ನೇಹ ಬೆಳೆಸಿದಳು. ಅದು ಪ್ರೀತಿಯಾಗಿ ತಿರುಗಿತು.
ವಿಷಯ ರಜತ್ ನ ಅರಿವಿಗೆ ಬಂದು ಅವನು ಕಳಿಸಿದ ಡೈವೋರ್ಸ್ ಪತ್ರ ಶೀತಲ್ ನ ಕೈ ಸೇರಿ ನಗುತ್ತಾ ಅಣಕಿಸುತ್ತಿತ್ತು!
@ಪ್ರೇಮ್@
24.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ