ಭಾನುವಾರ, ಆಗಸ್ಟ್ 4, 2019

1147. ರಂಗ ರಂಗಿ ಸಂಸಾರ

ಸಂಸಾರ

ರಂಗನು ರಂಗಿಯು ತೋಟಕೆ ಹೋಗಲು
ಬುತ್ತಿಯ ಗಂಟದು ಕೈಯಲ್ಲಿ!
ರಂಗನ ಆಟವು ರಂಗಿಯ ನೋಟವು
ಬಿಡದೆಯೆ ಸಾಗಿದೆ ದಾರಿಯಲಿ!!

ಬನ್ನಿರೋ ನೋಡುವ ರಂಗನ ಆಟವ
ರಂಗಿಯ ಪದಗಳ ಸುರಿಮಳೆಯೂ..
ರಂಗಗೆ ಸಹಸ್ರ ನಾಮಾರ್ಚನೆಯು
ಆದರೂ ಅವ ಬಿಡ ತರಲೆಯನೂ..

ಬಂಗಾರ ಬೆಳ್ಳಿ ಕಂಚು ಕಬ್ಬಿಣ
ಎನ್ನುತ ಹೊಗಳುವ ಮಡದಿಯನು..
ಸಿಟ್ಟಲಿ ಗುರ್ರನೆ ನೋಡುವ ಪರಿಯದು
ಸಿಂಹದ ರೂಪವ ನೆನೆದಿಹನು!!

ಬುತ್ತಿಯ ಗಂಟನು ನೆಲದಲಿ ಕುಕ್ಕಿಸಿ
ಸೊಂಟದಿ ಕೈಯನು ಹಿಡುಕೊಂಡು
ಕೋಪದಿ ಕೆಂಗಣ್ಣ ಬಿಟ್ಟು ನೋಡಲು
ರಂಗನು ಜಾರಿದ ಮರೆಯೆಡೆಗೆ..

ರಂಗಿಯ ಸಿಟ್ಟದು ಜರ್ರನೆ ಇಳಿಯಿತು
ಹೆದರಿದ ರಂಗನ ಮುಖ ನೋಡಿ!
ಓಡುತ ಹೋಗಿ ರಂಗನ ತಬ್ಬಲು
ಇಬ್ಬರ ಮುಖದಲು ನಗು ನೋಡಿ..

ಸಂಸಾರವೆಂದರೆ ಹೀಗೆಯೇ ನೋಡಿ
ಸುಖ ದುುಃಖಗಳ ಮಿಲನದ ಜೋಡಿ,
ಕಷ್ಟ ಸುಖವನು ಹಂಚುತ ಬಾಳಿ
ನಮಗೆ ನಾವೇ ಹಾಕುತ ಬೇಲಿ!!
@ಪ್ರೇಮ್@
29.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ