ಭಾನುವಾರ, ಆಗಸ್ಟ್ 4, 2019

1153. ರಾಘವೇಂದ್ರನೇ..

ರಾಘವೇಂದ್ರನೇ..

ಗುರು ಸಾರ್ವಭೌಮ ಗುರು ಕುಲೋತ್ತಮ
ಬೃಂದಾವನ ನಿವಾಸಿ ರಾಘವೇಂದನೇ...

ನಮ್ಮಯ ಕಷ್ಟವ ದೂರಗೊಳಿಸಿ
ಕಾಪಾಡೆಮ್ಮನು ಭಕ್ತರ ಪ್ರಿಯನೆ..
ಸದ್ಬುದ್ಧಿಯ ನೀ ನೀಡಿ ಹರಸು
ಸರ್ವರ ಹೃದಯದಿ ನೆಲೆಸಿರುವವನೇ...

ಹನುಮನ ನೋಡುತ ಗೆಳೆತನ ಸಾರುವೆ
ನಿತ್ಯವೂ ಬಕುತರ ಪೂಜೆಯ ಪಡೆವೆ..
ಎದೆ ಮೆದುಳಲಿ ಜನಕೆ ಭಕ್ತಿಯ ಭಾವವ
ತುಂಬುತ ಸಲಹುವೆ ಸಜ್ಜನ ಪ್ರಿಯನೇ..

ಮಂಗಳ ರೂಪಿ ಗೋವಿನ ಪಾಲಕ
ನಿನ್ನ ನಂಬುವುದೇ ನಮ್ಮಯ ಕಾಯಕ..
ನಂಬಿದ ಜನರ ಪೊರೆಯುವ ದೇವನೆ,
ಸತ್ಯದ ಮಾರ್ಗದಿ ನಮ್ಮನು ನಡೆಸು....
@ಪ್ರೇಮ್@
23.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ