ಗಝಲ್
ಕೊಳೆಯ ತೊಳೆದೆಯಾ ಮಳೆಯೇ ಹರಸಲು ಮಾನವರಿಗೆ?
ಇಳೆಗೆ ಸುರಿದೆಯಾ ದೇವತೆಯೇ ಬುದ್ಧಿಕಲಿಸಲು ಮಾನವರಿಗೆ?
ಸಾಕಿದ ಪಶು ಪಕ್ಷಿ ಪ್ರಾಣಿಗಳ ಹೊತ್ತೊಯ್ದೆ!
ಹಾಸಿದ ದಿಂಬು,ಹಾಸಿಗೆಗಳೂ ಒದ್ದೆ ಮಾಡಿದೆ ಬೆರಗಾಗಿಸಲು ಮಾನವರಿಗೆ?
ನಾಳೆಗೆ ಕೂಡಿಟ್ಟಿರುವುದು ಸರಿಯಲ್ಲ, ನಾಳೆಯೆಂಬುದಿಲ್ಲ!
ಬಡವ ಬಲ್ಲಿದ ಸಮಾನನು ನೀರಿನೆದುರು ಎಂದು ತೋರಿಸಲು ಮಾನವರಿಗೆ?
ಪ್ರಕೃತಿಗೆ ಮಾನವ ಸರಿಸಾಟಿ
ಅಲ್ಲವೆಂದು ತೋರಿಸಿಹೆ,
ನೋವು ಕೊಟ್ಟೆಯಾ ನಾ ಮೇಲೆಂದು ಮೆರೆಯದಿರಲು ಮಾನವರಿಗೆ?
ಮನೆ ಮಠ ಕಳೆದುಕೊಂಡು ಬೇಸರದಿಂದಿರುವರು ಜನ,
ಮತ್ಸರವ ಬಿಡಿರೆನುತ ಸಲಹೆಯಿತ್ತೆಯಾ ಬೆಳೆಯಲು ಮಾನವರಿಗೆ?
ಸುರಿಸುರಿದು ತುಂಬಿರುವೆ ಕೆರೆ, ಕೊಳ ನದಿಗಳಲಿ,
ಪರಿಪರಿಯಲಿ ಬೇಡಿದರೂ ರಭಸ ಬಿಡಲಾರೆ, ಉತ್ತರಿಸಲು ಮಾನವರಿಗೆ?
ಆಸ್ತಿ ಅಂತಸ್ತೆಲ್ಲಾ ಉಪಯೋಗವಿಲ್ಲ ಜಗದಲಿ!
ಬಿರುಸಾದೆಯಾ ಪ್ರೇಮ ಬೀಜವ ಬಿತ್ತಲು ಮಾನವರಿಗೆ?
@ಪ್ರೇಮ್@
10.08.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ