ಸ್ನೇಹ
ಬಲ್ಲವನೆ ಬಲ್ಲ ಸ್ನೇಹದ ಅನುಭವ
ಗಳಿಸಿದವನೆ ಬಲ್ಲ ಸ್ನೇಹದ ಋಣವ//
ಗೆಳೆಯರ ಮನವ ಗೆದ್ದವನೆ ಜಾಣ,
ಉತ್ತಮ ಸ್ನೇಹಿತರ ಪಡೆದವ ಅಲ್ಲ ಸಣ್ಣ!
ನಾನಾರೆಂದು ತಿಳಿಯಲು ಬೇಕೇ?
ಹಲವು ಸ್ನೇಹಿತರ ಬಳಗವಿರಬೇಕು//
ಆಡುವ ಪದಪದಕೂ ಗೆಳೆಯರ ಕೆಣಕುತ
ಬುದ್ಧಿಯ ಮಾತನು ಕ್ಷಣಕೂ ಹೇಳುತ!
ಅಡ್ಡದಾರಿಯತ್ತ ಸಾಗದಿರಲು ಸಲಹೆ ನೀಡುತ,
ಉತ್ತಮ ಹಾದಿಯ ತೋರುವ ಗೆಳೆಯರಿರುತ//
ಮನಕೆ ಸಂತಸ ತರುವವ ಸ್ನೇಹಿತ,
ಹೃದಯದ ಮಾತನು ಹಂಚುವವ ಸ್ನೇಹಿತ,
ಬದುಕ ತಳ ಕಿತ್ಹೋದಾಗ ಜೋಡಿಸುವವ ಸ್ನೇಹಿತ,
ಬಾಳಿನ ಹಾದಿಯ ಮುಳ್ಳನು ಸರಿಸುವವ ಸ್ನೇಹಿತ//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ