ಭಾನುವಾರ, ಆಗಸ್ಟ್ 4, 2019

1144. ಹಾಡಿನ ಹಂಬಲ

ಹಾಡಿನ ಹಂಬಲ

ಕಂಚಿನ ಕಂಠದ ಮಿಂಚಿನ ಮಾಲೆ
ನಿನ್ನಯ ರಾಗವ ಕೇಳಿಸೆಯಾ?
ವಂಚಿತ ಮನದ ಹಿಂದೋಡುವ ಬಾಲರಿಗೆ
ನಿನ್ನಯ ಜ್ಞಾನವ ಕಲಿಸುವೆಯಾ?//

ಕೋಲ್ಮಿಂಚಿನ ತುದಿಗೆ ರಾಗವ ಕಟ್ಟಿ
ನೂಪುರದಿ ಅದ ಎಳೆಯುವೆಯಾ?
ಮನದ ಸಾಗರದಿ ಏಳಲಿ ಅಲೆಗಳು
ದಡಕೆ ತಂದಪ್ಪಳಿಸಿ ಓಡಿಸೆಯಾ?//

ಪದರ ಪದರವಾದ ರಾಗ  ತರಂಗದಿ
ಮೈಮನವೆಲ್ಲ ನವಿರೇಳಿಸ ಬಾ,
ಹಾಡಿ ರಾಗ ಲಯ ತಾಳದ ನಡುವಲಿ
ಮುಳುಗಿ ಹೋಗುವಂತೆ ಹಾಡಲು ಬಾ..//

ಮೋಡ ರಾಶಿಗೆಲ್ಲ ಗುಡುಗಲು ಹೇಳಿ
ವರ್ಷ ಧಾರೆಯನು ಸುರಿಸುವೆಯಾ!
ಹಾಡ ಮೋಡದಲಿ ನೆಮ್ಮದಿ ಕಾಣುತ
ಮನಕೆ ಮಳೆಯ ತಂದು ಹರಸುವೆಯಾ!//
@ಪ್ರೇಮ್@
16.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ