ಗುರುವಾರ, ಆಗಸ್ಟ್ 15, 2019

1172. ಗಝಲ್-22

ಗಝಲ್

ಬಂತಲ್ಲ ಭಾರತದ ಕಣ್ಣೀರ ತೊಳೆವ ಮಳೆ!
ತಂತಲ್ಲ ಬೇಸರದ ಛಾಯೆಗಳ ಹೊಂದಿರುವ ಕಳೆ!

ಕಷ್ಟಪಟ್ಟ ರೈತ ಬೆವರುಸುರಿಸಿ ವರುಷವಿಡೀ ಹೊಲದಲಿ,
ತೋಯ್ದು ಹೋಯ್ತಲ್ಲ ಮಾನವರ ಸಂಪತ್ತಿನಂತಿರುವ ಬೆಳೆ!

ಬಡವ- ಬಗ್ಗರು ಎಂಬ ಬೇಧವಿಲ್ಲವು ಇದಕೆ,
ಒಂದಾಗಿ ಹೋಯ್ತಲ್ಲ ಜಾತಿ ಮತ ಕೂಡಿರುವ ಧರ್ಮಗಳೆ!

ನೆರೆಯ ನೀರದು ಬಿರುಸಾಗಿ ಮನೆಗೆ ನುಗ್ಗಿಹುದು,
ಸೆರೆಯಲಿಟ್ಟಂತೆ ಜೀವ ಜಲದ ಪ್ರಾಣವ ಲೆಕ್ಕಗಳೆ!

ಸಾಕು ಪ್ರಾಣಿಗೂ ಉಸಿರು ನಿಂತಿಹುದು,
ಬೇಕು ವರ್ಷವೆನುವ ಮನುಜ ಸಾಕಲ್ಲವ ಬಳೆ!

ನಿತ್ಯ ಸಂಕಟವ ನೀಡಿರುವೆ ಪ್ರಕೃತಿಗೆ,
ಹಿಂಪಡೆಯಬಾರದೇ ಅದು ನೋವಾಗುವ ಇಳೆ!

ಸ್ವಚ್ಛ ಪರಿಸರವ ಕಡಿದು ದಿನಾಲು ಕರಗಿಸುತಲಿರುವೆ,
ಶುದ್ಧಗೊಳಿಸುತಲಿದೆ ಪ್ರೇಮದಿ ನೀರು ನೀ  ಬಿಸಾಕಿರುವ ಕೊಳೆ!
@ಪ್ರೇಮ್@
10.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ