ಶುಕ್ರವಾರ, ಮೇ 17, 2024

ಸಮರ್ಪಣೆ

ಸಮರ್ಪಣೆ

ಪದಗಳ ಗೂಡಲಿ ಸಮರ್ಪಣೆ ಪಕ್ಷಿಗೆ 
 ಗುಟುಕನು ನೀಡುತಿಹೆ 
ಮದವನು ಮರೆತು ಮಾನವ ಬದುಕ
ಹಾಡನು ಹಾಡುತಿಹೆ

ಶೋಷಣೆ ಮಾಡಿದ ಮನಗಳ ನಿತ್ಯ
ನೆನಪಿಸಿ ಬಾಳುತಲಿ 
ಪೋಷಣೆಗೈದು ಬೆಳೆಸಿದ ಮಾತೆಯ 
ವರವನು ಬೇಡುತಲಿ 

ಘೋಷಣೆ ಕೂಗುತ ಮತಗಳ ಬೇಡಿ
ಸಮಾಜವ ಮರೆಯುತ್ತ 
ಸಂರಕ್ಷಣೆ ಮಾಡುವ ಕಾರ್ಯವ 
ಮರೆತು
ಮೋಹದಿ ತೇಲುತ್ತ 

ಜನಗಳ ಶಾಪ ಬೇಡವೋ ಭೂಪ
ಸಹಾಯವ ನೆನೆಯೋಣ
ದೇಶದ ಒಳಿತಿಗೆ ಬಾಳನು ನೀಡಿ
ಕೃತಜ್ಞತೆ ನೀಡೋಣ//
@ಹನಿಬಿಂದು@
18.05.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ