ಮನದೊಳಗೆ ಚಿಂತೆಯ ಕಿಡಿಯೊಂದು ಗೀರಿರಲು
ನನ್ನನಿಸಿಕೆ ಆಳದಲಿ ಬಾಳ ರಥ ಎಳೆವ ನಾವಿಕ
ದಡ ಮುಟ್ಟಿಸುವ ಶಸ್ತ್ರ ಸಜ್ಜಿತ ಸೈನಿಕರಂತೆ
ಚಿಂತೆಯ ಅಳಿಸುವ ಗೆಳೆಯನ ಪಡಿ ನೆರಳಿನಂತೆ
ಬದುಕ ರೂವಾರಿ ರಾಜ ನಾನೇ ಏಕಾಗಬಾರದು?
ಸಾವಿರ ಮುಳ್ಳುಗಳಿರುವ ಗಿಡದಲೂ ಒಳಗೆ
ಸುಂದರ ಗುಲಾಬಿ ಅರಳುವಂತೆ ಅಲ್ಲವೇ?
ಶೂದ್ರನ ಗದ್ದೆಯಲ್ಲೂ ಒಳ್ಳೆ ತಳಿ ಬೆಳೆಯಬಲ್ಲದು
ಯಾರಿಗೆ ಯಾವ ಕಲೆಯೋ ಯಾರು ಬಲ್ಲರು
ನಮ್ಮ ಬದುಕ ಬಾವುಟ ನಾವೇ ಹಾರಿಸಲಾರೆವೇ?
ಬಲೆಯ ಬೀಸಿದಾಗ ಮೀನು ಸಿಗಬಹುದೆಂಬ ನಂಬಿಕೆ
ಮೀನುಗಾರರ ಕೂಗಾಟಕ್ಕೆ ಮರೆಯದೇ ನೋವ ಶಿಖೆ?
ಪ್ರಕಾಶಕರ ಪುಸ್ತಕ ಮಾರಾಟಕ್ಕೂ ಪ್ರೇರಣೆ ಬರಹದ್ದು
ನಾಯಿ ಮರಿ ಕೋತಿಗಳಿಗೆ ಆಹಾರ ನಿತ್ಯ ಬೇಕಾದುದು
ಇನ್ನು ಹೇಳುವವನ ಬದುಕ ಅವನೇ ತಿದ್ದಿ ನಡೆಯ ಬೇಕಾದ್ದು
ರಾಜ ರಾಣಿಯರ ಕಾಲ ಹೋಗಿ ಮತ್ತೆ ಬರುವಂತಿದೆ
ಹಣ ಉಳ್ಳವನೆ ರಾಜ, ಬಡವನೇ ಸಾಮಾನ್ಯ ಪ್ರಜೆ
ಗುಣವಂತರಿಗೆ ಕಾಲವೇ ಇದು ಎಂಬ ವ್ಯಾಖ್ಯಾನ
ಆದರೂ ಬಾಳ ಬೇಕಿದೆ ಕಣ್ಮುಚ್ಚಿ ಮಕ್ಕಳು ಮರಿಗಾಗಿ
ತಪ್ಪು ಮಾಡದ ಮೇಲೆ ಹೆದರಿ ಏಕೆ ಬಾಳ ಬೇಕಿದೆ?
@ಹನಿಬಿಂದು@
30.05.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ