ಓಡುತಲಿರುವೆ
ಓಡುತಲಿರುವೆ ಸಮಯದ ಜೊತೆಗೆ
ಗಡಿಯಾರದೊಳಗಿನ ಮುಳ್ಳಂತೆ
ಕಾಡುತಲಿಹವು ಸುಖ ದುಃಖಗಳು
ಬೆನ್ನನು ಬಿಡದ ಬೇತಾಳನಂತೆ
ಏರಿಕೆ ಇಳಿಕೆ ಸಾಮಾನ್ಯ ಪಾಠ
ಮೇಲಕು ಕೆಳಕೂ ಜೀಕಾಟ
ಓಡುವ ಸಮಯದ ಹಿಂದೆ
ಬದುಕಿದೆ ನಮ್ಮದು ಮುಂದೆ..
ಇಂದಿನ ಓಟ ನಾಳಿನ ಕಾಣಿಕೆ
ಕಂದನ ಕೂಗಿನ ಹಾಗೆ
ಹಾಡಿನ ತಾಳ ಭಾವ ರಾಗ
ಮೋಡಿಯ ಮಾಡುತ ಹೀಗೆ
ಸುಖ ದುಃಖಗಳ ಎದುರಿಸಿ ಓಟ
ಸಿಹಿ ಕಹಿ ನೆನಪು ಕೂಡಿ
ಮುತ್ತು ಮತ್ತು ಮೆಟ್ಟುವ ಆಟ
ಸಾಗುತಲಿ ಬಾಳ ನಾಗಾಲೋಟ
@ಹನಿಬಿಂದು@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ