ನೀನೇ
ನೀನೇ ಮುತ್ತು ರತ್ನ ಹವಳ
ನೀನೇ ಜೀರ್ಣಕ್ಕಾಗೋ ಕವಳ
ನಿನ್ನ ಜೊತೆಗೆ ಕನಸು ಬಹಳ
ನಿನ್ನ ಮನವು ಸದಾ ನಿರ್ಮಲ
ಬದುಕ ಬೇಕು ಕನಸಿನಂತೆ
ಆಡ ಬೇಕು ಸತ್ಯವಂತೆ
ಬಾಳು ಒಂದು ಆಟವಂತೆ
ನಾಲ್ಕು ದಿನದ ನೋಟವಂತೆ
ಪ್ರೀತಿ ದ್ವೇಷ ಕಾಮ ಕ್ರೋಧ
ಮೋಹ ಮದ ಮತ್ಸರ
ನೀತಿ ನಿಯಮ ಮೀರದಂತೆ
ದಾಹ ತೀರೆ ಏನು ಚಿಂತೆ
ಶಾಂತಿ ಪ್ರೀತಿ ಕಾಂತಿ ನೀತಿ
ಶಕ್ತಿ ಸ್ಪೂರ್ತಿ ಯುಕ್ತಿ ಕೀರ್ತಿ
ಬಾಳು ಎತ್ತರೆತ್ತರಕ್ಕೆ ಜಾರಿ
ಹಕ್ಕಿಯಂತೆ ಬಾನಲ್ಲಿ ಹಾರಿ
ನೀನು ಜೊತೆಗೆ ಇರಲು ಮಜಾ
ಒಂಟಿತನವು ನನಗೆ ಸಜಾ
ನಾನು ನೀನು ಬೇರೆ ಏನು
ದೇಹ ಮನಸು ಒಂದೇ ಭಾನು
ದೇವ ಕೊಟ್ಟ ತೀರ್ಥ ತಾನೇ
ಕುಡಿಯಲದು ಸ್ವಾದವೇನೆ
ಅಪ್ಪುಗೆಯ ಭರವಸೆಯು ಸಾಕು
ನೀನು ಜೊತೆಗೆ ನಿತ್ಯ ಬೇಕು
@ಹನಿಬಿಂದು@
18.05.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ