ಶುಕ್ರವಾರ, ಮೇ 3, 2024

ಗಜಲ್

              ಗಝಲ್
ಪ್ರಾಣ ಸಖನೇ  ನಿನ್ನ ಮೂಗಿನ ತುದಿಯ ಕೋಪವ ಕಚ್ಚಿ ಕಚ್ಚಿ  ತಿಂದು ಮುಗಿಸುವ ಆಸೆ
ಕೈ ಮೇಲೆ ಕೈ ಇಟ್ಟು ಬೆರಳಿನ ಸಂಧಿಯೊಳಗೆ ಬೆರಳು ತೂರಿಸಿ
ಕೈಗಳ ಬೆಸೆಯುವ ಆಸೆ

ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಣ್ಣಲ್ಲೇ ಮಾತನಾಡುತ್ತಾ ಪೂರ್ತಿ ದಿನ ಕಳೆಯಬೇಕು
ಜೊತೆಗೆ ಹೃದಯದ ಬಡಿತ ಮನದ ಮಿಡಿತ ಕೇಳುತ್ತಾ ನನ್ನ ನಾನೇ ಮರೆಯುವ ಆಸೆ

ಹೂ ಆದಾಗಲೇ ಮಿಡಿಯಾಗಿ ಕಾಯಿಯಾಗಿ ಹಣ್ಣಾಗುವ ಕನಸು ಮರಕ್ಕೆ
ಭೂಮಿಯ ಮೇಲೆ ಸರ್ವ ಖುಷಿಯ ನಿನ್ನೊಂದಿಗೆ ಅನುಭವಿಸಿ ಸುಖಿಸಿ  ಸಾಯುವ ಆಸೆ

ಮೋಹ ಮದ ಮತ್ಸರ ಕಾಮ ಕ್ರೋಧ ಪ್ರೇಮ ಸಹನೆ ತಾಳ್ಮೆ ಕೋಪ ಭರವಸೆ
ಎಲ್ಲಾ ಗುಣಗಳ ನಿನ್ನೊಂದಿಗೆ ಹಂಚಿಕೊಂಡು ಬಾಳಲ್ಲಿ ಒಂದಾಗಿ ಬೆಸೆದು ಬದುಕುವ ಆಸೆ

ರಾತ್ರಿ ಆಗಲಿ ಹಗಲಾಗಲಿ ಮುಂಜಾನೆ ಮುಸ್ಸಂಜೆಯ ಸಮಯವೇ ಆಗಲಿ
ರಾಜ ರಾಣಿ ನಾವಾಗಿ ಬದುಕ ರಥವ ಮುಂದೆ ಮುಂದೆ ಮುನ್ನಡೆಸುವ ಆಸೆ

ತಾರೆಯ ತರುವ ಚಂದಿರನ ಮುಡಿವ ಮಂಗಳಕ್ಕೆ ಹಾರುವ ಆಸೆಯಿಲ್ಲ ನನಗೆ
ಸುಖ , ಶಾಂತಿ, ನೆಮ್ಮದಿ,  ಸಹಾಯ ಆರೋಗ್ಯ ಭಾಗ್ಯ ಸುಖ ದುಃಖವ ಹಂಚುವ ಆಸೆ

ದ್ವೇಷ ರೋಷ ಕೋಪ ಮತ್ಸರ ನಾನೇ ಎಂಬ ಅಹಂಕಾರ ಬರಬಾರದು ನಮ್ಮೊಳಗೆ
ನೀನು, ನೀನೆಂದರೆ ನಾನು ಎಂಬ ಪ್ರೇಮದ ಹನಿಯ ಭಾವ ಪಸರಿಸುವ ಆಸೆ
@ಹನಿಬಿಂದು@
02.04.2024






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ