ಬುಧವಾರ, ಮೇ 29, 2024

ಏನೇನೋ

ಏನೇನೋ

ದೇವನ ಲೀಲೆ ಬದುಕಿನ ಹಾದಿ
ಒಂದೂ ಅರಿಯೆನು ನಾನಿಲ್ಲಿ
ಪ್ರೀತಿ ಕಾಳಜಿ ಸ್ನೇಹ ದ್ವೇಷವೂ
ಎಲ್ಲವೂ ಬರುವುದು ಒಬ್ಬರಲಿ

ನ್ಯಾಯ ನೀತಿ ಸಮಾನತೆಗಾಗಿ
ಹೋರಾಟ ತಾನೇ ಬದುಕಿನಲಿ
ಕಾಯ ಮರೆತರೂ ಉದರವು ಬಿಡದು
ಸ್ವಾತಂತ್ರ್ಯ ಬೇಕು ಬಾಳಿನಲಿ

ಮೋಸ ಅನ್ಯಾಯ ನಡೆಯದು ಇಲ್ಲಿ
ಕೇಳೋ ಮೂರ್ಖ ಭೂಮಿಯಲಿ
ಇಂದು ರಾಜನು ನಾಳೆ ಸಭಿಕನು
ಅರಿಯೋ ದೇವನ ಸೃಷ್ಟಿಯಲಿ

ಕಡಲಿನ ಆಳದ ಮುತ್ತನು ಹಿಡಿಯಲು
ಬಾಳಿನ ವೇಗವು ಗುರಿಯಾಗಿ
ಹನಿ ಸೇರಿದರೆ ಹಳ್ಳವು ಎಂಬುದು
ಸರ್ವ ಹೃದಯಕೂ ಜೊತೆಯಾಗಿ
@ಹನಿಬಿಂದು@
29.05.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ