ಶನಿವಾರ, ಮೇ 18, 2024

ಶೋಷಣೆ

ಶೋಷಣೆ

ಘೋಷಣೆ ಕೂಗಲು ಎಲ್ಲರೂ ಮುಂದು
ಶೋಷಣೆ ಮಾತ್ರ ಮಹಿಳೆಗೆ ಸಿಂಧು
ಸಮರ್ಪಣೆ ಜಗದಲಿ ಅವಳಲಿ ಮಾತ್ರವೇ
ಆಕರ್ಷಣೆ ಇದ್ದರೂ ಒಮ್ಮೆಗೆ ಮರೆವರು

ಘರ್ಷಣೆ ನಿತ್ಯವೂ ಬದುಕಿನ ಪಥದಲಿ 
ಪೋಷಣೆ ಮಾಡಲು ಸರ್ವರ ಮನೆಯಲಿ
ಬವಣೆಯು ಬಾಳಲಿ ಹೆಣ್ಣಿನ ಬದುಕಲಿ
ವಿವರಣೆ ಹೇಗೆ ಶೀಲಕೆ ಬೇಡಲಿ

ಮಣೆಯನು ಹಾಕದು ಸರಕಾರ ಇಲ್ಲಿ
ಕೆನೆಯನ್ನು ಬೇಡುವ ಕೃಷ್ಣನ ತೆರದಲಿ
ಜಾಗರಣೆ ಬದುಕಲಿ ಆಗದು ಎಂದೂ
ತ್ಯಾಗವೇ ಸ್ತ್ರೀಯ ಕ್ಷಣದಲಿ ಮುಂದೂ

ಪ್ರೀತಿಯ ಮಾತನು ಕೇಳಲು ಬೇಕು
ಹಾಸಿಗೆಯಡಿಯಲಿ ಬೀಳಲು ಬೇಕು
ಅಮ್ಮ ಅಕ್ಕ ಮಡದಿಯೂ ಬೇಕು
ಹೆಣ್ಣು ಮಗು ಮಾತ್ರ ಸಾಯಲು ಬೇಕು..
@ಹನಿಬಿಂದು@
18.05.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ