ಚುಟುಕು ಬಗ್ಗೆ ಚುಟುಕು ಮಾಹಿತಿ
ಚುಟುಕು ಅಂದರೆ ಚಿಕ್ಕದಾಗಿ ಚೊಕ್ಕ ಅರ್ಥ ಕೊಡುವಂಥದ್ದು.
ಹನಿಗವನ ,ಹಾಯ್ಕು,ಟಂಕಾ, ರುಬಾಯಿ ಎಲ್ಲವೂ ಚುಟುಕಿನ ಸಾಹಿತ್ಯಗಳೇ.
ಆದರೆ ಸಾಂಪ್ರದಾಯಿಕ ಚುಟುಕು ಬರವಣಿಗೆಯ ಪ್ರಕಾರದಲ್ಲಿ ಇವೆಲ್ಲಕ್ಕೂ ಭಿನ್ನ.
ದಿನಕರ ದೇಸಾಯಿ ಮಾದರಿ ಚುಟುಕಿಗೆ ಉತ್ತಮ ಉದಾಹರಣೆ.
ಅದು ೧೮ ಮಾತ್ರೆಗಳ ೪ ಸಾಲು.ಅಂತ್ಯ ಪ್ರಾಸ ಯುಕ್ತ.
ಅದಲ್ಲದೆ ಆದಿ ಪ್ರಾಸ ಮಧ್ಯಪ್ರಾಸ ಅಂತ್ಯಪ್ರಾಸ ಸಹಿತ ಬರೆಯ ಬಹುದು.
ಅಂತ್ಯ ಪ್ರಾಸ ಮೊದಲೆರಡು ಉಳಿದೆರಡು ಸಾಲುಗಳಲ್ಲಿ ಒಂದೇ ಅಥವಾ ಬೇರೆ ಬೇರೆಯಾಗಿಯೂ ಇರ ಬಹುದು.
ಮಾತ್ರೆಗಳು ೧೮ ರ ಬದಲಿ ಇತರ ಸಂಖ್ಯೆ ಆದರೂ ನಿಶಿದ್ಧವಲ್ಲ.
ಹಾಗೆಯೇ ೧೪ ೧೩ ೧೪ ೧೩ ಮಾತ್ರಾ ಪ್ರಕಾರ ಬರೆದವರೂ ಇದ್ದಾರೆ.
# ಡಾ ಸುರೇಶ ನೆಗಳಗುಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ