ಭಕ್ತಿ ಗೀತೆ
ಜಯವಾಗಲಿ ಜಯವಾಗಲಿ
ಮೊದಲು ಪೂಜ್ಯ ಗಣಪತಿಗೆ
ವಿದ್ಯೆ ಕೊಡುವ ಸರಸ್ವತಿಗೆ
ದುಡ್ಡು ತರುವ ಮಹಾಲಕ್ಷ್ಮಿಗೆ
ಖುಷಿಯ ತರುವ ಹರಿನಾಮಕೆ
ಜಗವ ಪೊರೆವ ಶಿವ ರೂಪಕೆ
ಪ್ರೀತಿ ಕೊಡುವ ದುರ್ಗೆಗೆ
ಕಾದು ಪೊರೆವ ಶಕ್ತಿಗೆ
ಜಯವು ವೀರ ಸೈನಿಕರಿಗೆ
ಅನ್ನ ಕೊಡುವ ರೈತರಿಗೆ
ಬಿತ್ತಿ ಬೆಳೆದು ಹೊತ್ತು ತಂದ
ತಂದೆ ತಾಯಿ ಪಾದಕೆ
ವಿದ್ಯೆ ಬುದ್ಧಿ ಕಲಿಸಿದ
ಗುರು ಸ್ಥಾನದ ದೇವಗೆ
ತಿದ್ದಿ ಬೆಳೆಸೋ ಹಿರಿಯರ
ಪದ ಪಾದ ಕಮಲಕೆ
@ಹನಿಬಿಂದು@
13.10.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ