ಶುಕ್ರವಾರ, ಅಕ್ಟೋಬರ್ 11, 2024

ಭಾವಗೀತೆ ಧ್ವನಿ

ಭಾವಗೀತೆ

ಧ್ವನಿ

ಅಲ್ಲೇ ಕೇಳುತಿದೆ ಮಧುರ ಧ್ವನಿಯಿದು 
ನಾಲ್ಕು ಸಾಲು ಬಂದು
ಇಲ್ಲೇ ಬೀಳುತ್ತಿದೆ ಮಳೆಯ ಹನಿಗಳು
ಬಾಳು ಬೆಳಗಲೆಂದು//

ಮಧುರ ಬೆರೆತ ಪ್ರೇಮ ನಾದವಿದು
ಮೋಡಿಯ ಮಾಡುತಿದೆ 
ಸಿಂಧೂರ ಧರಿಸಿದ ಮಾತೆಯ ರೀತಿ
ನಗುವ ಚೆಲ್ಲುತಿದೆ..//

ಅಂದದ ಬಾಳಿಗೆ ಸಿಂಚನ ಸಂಕೇತ
ಮಾತು ಹೊರಗೆ ಬಂದು
ಚಂದದ ಮನಕೆ ಶೃಂಗಾರ ಕಾವ್ಯ
ಧಾತು ಇದುವೆ ಇಂದು//

ಸಿಹಿಯೂ ಸುಗಮವು ಕೀಳಲು ನಿಧಿಯು
ಮೋಹ ಪಾಶವಿಲ್ಲ
ಸವಿಯೂ ರುಚಿಯೂ ಸ್ನೇಹದ ಸುಧೆಯು
ಸತ್ಯ ನಾಶವಿಲ್ಲ..//
@ಹನಿಬಿಂದು@
11.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ