ಬುಧವಾರ, ಅಕ್ಟೋಬರ್ 2, 2024

ಹಳ್ಳಿ ಹುಡುಗಿ

ಹಳ್ಳಿ ಹುಡುಗಿ

ಒಂದು ಕಾಲದಲಿ ಮುಗ್ಧತೆ ಹೊತ್ತ
ಹೆಣ್ಣದು ಅಲ್ಲವೇ ಹೇಳಿ
ಟೀವಿ ಮೊಬೈಲ್ ಏನೂ ಇಲ್ಲದ
ಕಣ್ಣದು ಆರೋಗ್ಯ ಕೇಳಿ..

ತಾನು ತನ್ನದು ತನಗೆ ಎನ್ನದೆ
ಸರ್ವ ಜನರ ಜೊತೆ ಬದುಕಿರುವ
ಕುಟುಂಬ ಜನರಿಗೆ ಆದ್ಯತೆ ಕೊಟ್ಟು
ಊಟ ತಿಂಡಿಯ ತಯಾರಿಸುವ

ದಾವಣಿ ಲಂಗ ಮೊಗ್ಗಿನ ಜಡೆಯ 
ಸುರ ಸುಂದರಿಗೆ ಸಾಟಿಯೇ
ಇಳಕಲ್ ಸೀರೆ ಜರತಾರಿ ಕುಪ್ಪಸ
ಹಳ್ಳಿಯ ಹುಡುಗಿ ಘಾಟಿಯೇ! 

ಹಂಚಿ ತಿನ್ನುವ ಮಿಂಚಿನ ಗುಣದ
ಕೊಂಚ ಸಹನೆಯ ಹೆಣ್ಣಿವಳು
ಮಂಚವ ಅರಿಯದ ಹೊಂಚನು ಕಾಣದ
ಕಂಚಿನ ಕಂಠದ ಸಿರಿಯಿವಳು

ಮೋಸವ ನೆನೆಯದ ಪ್ರೀತಿಯ ಹಂಚುವ
ಮುಗ್ಧ ಮನದ ಕನ್ಯೆ
ತೋಷದಿ ಬದುಕುವ ಗೆಳೆಯರ ಕೂಡುವ
ಶುದ್ಧ ಮನಸಿನ ಹೆಣ್ಣೇ
@ಹನಿಬಿಂದು@
03.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ