ಶುಕ್ರವಾರ, ಅಕ್ಟೋಬರ್ 18, 2024

ನಗು

ನಗು

ಅಳುವಿನ ಹಿಂದಿನ ನಗುವಿನ ನೋಟವ
ಅರಿತವ ಯಾರೇ ಹೇಳೆ ಸಖಿ
ಮನದಲಿ ಚೆಲ್ಲಿದ ಬೆಳದಿಂಗಳ ಹಾಲಿನ
ಖುಷಿಯನು ಹಂಚಲು ಬಾರೆ ಸಖಿ//

ಕತ್ತಲ ಬಳಿಕ ಬೆಳಕನು ಕಾಣಲು
ಚೆಲ್ಲುವೆ ನಗುವನು ತಾನೆ ಸಖಿ
ಬಿತ್ತಲು ಸಡಗರ ಪ್ರೀತಿಯ ಭಾವವ
ಗೆಲ್ಲುವೆ ಜಗವನೆ ಅಲ್ವೆ ಸಖಿ?

ಮೊತ್ತದಿ ಲೆಕ್ಕವ ಇಟ್ಟರು ಕೂಡ
ಸಂತಸ ಸಿಗದು ಜಾಣೆ ಸಖಿ
ಸುತ್ತಲು ಹಂಚಲು ನಗುವನು ಇಲ್ಲಿ
ನಿರಾಳ ಬದುಕು ನನ್ನ ಸಖಿ

ಮೋಸ ವಂಚನೆಯ ಜಾಡು ಹಿಡಿಯದಿರು
ನಗುವೇ ಮಾಯ ಮುದ್ದು ಸಖಿ
ಕೋಶ ಓದುತಲಿ ಜ್ಞಾನ ಪಡೆಯುತಿರು
ಬಿಗುವು ಯಾಕೆ ಪೆದ್ದು ಸಖಿ
@ಹನಿಬಿಂದು@
18.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ