ಶುಕ್ರವಾರ, ಅಕ್ಟೋಬರ್ 25, 2024

ಬದುಕುವ ಕಲೆ

ಬದುಕುವ ಕಲೆ

ಬದುಕಿನ ಬೆಳೆಯದು ಬದುಕುವ ಕಲೆಯು 
ಅರಿತವ ಬಾಳುವ ಮರೆತವ ಸಾಯುವ
ಬಾಲ್ಯದ ದಿನದಲಿ ಆಟವು ಪಾಠವು
ಕಲಿಕೆಗೆ ಬೇಸರ ಬರದಿರೆ ಸ್ವರ್ಗವು 

ಯೌವ್ವನ ಬರಲು ಆಕಾಶಕೆ ಏಣಿ
ಮೇಲೇರುವ ಗೀಳು, ಹೆಣ್ಣಿನ ಅಮಲು
ಧ್ಯೇಯವು ಇರಲು ಬಾಳದು ನೂಲು
ಗುರಿಯನು ಮರೆಯಲು ಮುಂದಿದೆ ಸೋಲು!

ಮದುವೆಯ ಬಳಿಕ ಬೇರೆಯೆ ವಿರಾಟವು
ಹೊಂದಾಣಿಕೆ ಎಂಬ ಕಷ್ಟದ ನೋಟವು
ಮೇಲು ಕೀಳಿನ ನೋವು ನಲಿವಿನ
ಗೆಲ್ಲುವ ಸೋಲುವ ಆಕಾಶದ ಏಣಿಯು 

ಮುಂದಿದೆ ರೋಗಗಳೆಂಬಾ ಭೀತಿಯು 
ದೇಹ ಮನಸಿನ ಸೌಖ್ಯದ ನೀತಿಯು
ತನ್ನ ತಪ್ಪಿಗೆ ತನಗೇ ನೋವದು
ಹಂಚಲು ಆಗದು ತನುಮನ ಗಾಯವು 

ಕೊನೆಗೆ ಮುಗಿಯುವ ಬಾಳಿನ ಕಾರ್ಯವು
ಒಂದಿನ ನಿಲ್ಲುವ ಆಟದ ಮನೆಯು
ನೀನು ನಾನು ಎಲ್ಲವ ಮರೆತು
ನೀನೇ ಎಲ್ಲಾ ಎನ್ನುವ ಗೀತೆಯು
@ಹನಿಬಿಂದು@
25.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ