ಟಾಟಾ ಹೇಳಿದ ಟಾಟಾ
ಬೇಕಾದ್ದೆಲ್ಲ ಭಾರತೀಯರಿಗೆ ಕೊಟ್ಟು
ಬಡವರ ಉದ್ಧಾರಕ್ಕೆ ಮನಸಿಟ್ಟು
ದಾನದ ಮಹತ್ವ ತಿಳಿಸಿ ಕೊಟ್ಟು
ದುಡಿಮೆಯ ಮಹತ್ವ ಕಲಿಸಿಕೊಟ್ಟು
ಟಾಟಾ ಸರ್ವರ ಹಿತೈಷಿಯಾಗಿ
ಭಾರತೀಯರ ಬೆಂಬಲಿಸಿ ಬಾಗಿ
ದುಡಿತದ ಹಣದ ದಾನಿಯಾಗಿ
ಭಾರತೀಯರ ರಾಯಭಾರಿಯಾಗಿ
ಒಂಟಿತನದಲಿ ಸಾಧನೆ ಮಾಡಿ
ಜಂಟಿ ಶಕ್ತಿಯಲಿ ಕಾರ್ಯವ ನೀಡಿ
ಮನದ ಒಳಗೆ ಧೈರ್ಯವ ದೂಡಿ
ನಿಜವಾದ ಪ್ರೀತಿಯ ಆಳವ ನೋಡಿ
ಭಾರತ ದೇಶಕೆ ನೀನೇ ವೀರ
ವ್ಯಾಪಾರ ಗೆದ್ದ ಸರದಾರ
ವಿವೇಕರ ಮಾತಿಗೆ ಹಾಕಿದೆ ದ್ವಾರ
ಭಾರತ ಮುನ್ನಡೆಸಿದ ಶೂರ
@ಹನಿಬಿಂದು@
14.10.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ