ಸೋಮವಾರ, ಏಪ್ರಿಲ್ 15, 2019

918.ತವರಿನ ಶಾಯರಿಗಳು-8

ಶಾಯರಿ..

ಅಡಿಗೆ ಮನೆಯ ಕೆಲಸದಿ
ಸುರಿಯುತಲಿತ್ತು ಬೆವರು!

ಆಗ ತುಂಬಾ ನೆನಪಾಯಿತು,
ಅಮ್ಮನೊಡನೆ ನನ್ನ ತವರು!!

2.

ಮದುವೆ ಮನೆಯಲ್ಲಿ ಬಂತು
ಕೈ ತುಂಬಾ ಹಣದ ಕವರು!!

ಬಿಟ್ಟೀತೇ ಅದನು ನನಗೆ
ನನ್ನವಳ ಪ್ರೀತಿಯ ತವರು!!?

3.

ಕುಳಿತಿದ್ದೆ ನಾನು ಓಪನ್ ಮಾಡಿ
ಪೂರ್ತಿ ನೀರ ಶವರು!!
ನೆನಪಾಯಿತಾಗ ಬಾಲ್ಯದ ದಿನಗಳ
ನಾ ಆಡಿ ಬೆಳೆದ ತವರು!!

4. ಆಗಾಗ ಕನಸಲ್ಲಿ ಬಂದು
ಮಾತನಾಡುವರು ನನ್ನ ದೇವರು!
ಅವರಿರುವ ದೇವಾಲಯ
ನನ್ನ ಪ್ರೀತಿಯ ತವರು!!

5.

ಅದೇನೋ ಪುಳಕ ಕೇಳಲು
ಮಗದೊಮ್ಮೆ ಅದರ ಹೆಸರು!
ಅದೇ ನನ್ನ ಅಮ್ಮನಿರುವ
ಅಂದ ಚಂದದ ಪ್ರೀತಿಯ ತವರು!!

6.
ಆಡಿ, ಪಾಡಿ ಕುಣಿದು ನಲಿದಾಡಿ
ಬೆಳೆದೆವು ನಾವಾಗಿ ಒಡನಾಡಿ!

ತವರ ಹಿರಿಮೆ ಹೇಳಿದಷ್ಟು ಸಾಲದು,
ನನ್ನ ಕಳಿಸಲು ನಿಮಗೇನು ದಾಡಿ!!
@ಪ್ರೇಮ್@
16.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ