ಮಂಗಳವಾರ, ಏಪ್ರಿಲ್ 9, 2019

906. ಮರಳಿ ಬಂದಿದೆ ಯುಗಾದಿ

ಮರಳಿ ಬಂದಿದೆ

ಬೇವಿನ ಕಹಿಯ ಬೆಲ್ಲದ ಸಿಹಿಯ
ಹೊತ್ತು ಬಂದಿದೆ ಯುಗಾದಿ
ಹೊಸ ವರುಷದ ಹೊಸ ಕನಸನು
ಮರಳಿ ತಂದಿದೆ ಯುಗಾದಿ//

ನವವಸಂತಕೆ ನವರಾಗವ
ನವೀನಗೊಳಿಸಿ ಬಂದಿಹುದು..
ಹಲಜನತೆಗೆ ಎಚ್ಚರಾಗಿರಿ
ಎಂಬ ಸಂದೇಶ ತಂದಿಹುದು//

ಮೂಕ ಮೌನ ಬಿಸುಟು ಹೋಗಿ
ಎದ್ದು ಬನ್ನಿರೆಂದಿಹುದು..
ಸುಖ ದುಃಖವ ಸಮಾನಾಗಿ
ಸ್ವೀಕರಿಸಿ  ಬಾಳಿರೆನುತಲಿಹುದು//

ನೆರೆಯ ಹೊರೆಯ ಜನರಿಗೆಲ್ಲ
ತಿಳಿಸಿ ಹೇಳೆ ಕಾದಿಹುದು..
ಪ್ರೀತಿ, ಪ್ರೇಮ, ಭ್ರಾತೃತ್ವವ
ಬೆಳೆಸೆ ಸಾರಿ ಹೇಳಿಹುದು//

ಮತ್ತೆ ಮತ್ತೆ ಚಿಗುರಿನಂತೆ
ಮರಳಿ ಯುಗಾದಿ ಬಂದಿಹುದು..
ಹೊಸ ಬಾಳಿಗೆ ಸರ್ವ ಜನಕೆ
ನವ ಚೈತನ್ಯ ತಂದಿಹುದು//
@ಪ್ರೇಮ್@
06.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ